ADVERTISEMENT

ಸಾಮಾಜಿಕ ಭದ್ರತಾ ಪಿಂಚಣೆ: ಫಲಾನುಭವಿಗಳಿಗೆ ಮಾಸಿಕ ₹3000 – ಆಂಧ್ರ ಸಿಎಂ ಜಗನ್‌

ಪಿಟಿಐ
Published 3 ಜನವರಿ 2024, 12:36 IST
Last Updated 3 ಜನವರಿ 2024, 12:36 IST
<div class="paragraphs"><p>ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ</p></div>

ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ

   

ಕಾಕಿನಾಡ (ಆಂಧ್ರಪ್ರದೇಶ): ಸಾಮಾಜಿಕ ಭದ್ರತಾ ಪಿಂಚಣೆ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಮಾಸಿಕವಾಗಿ ₹ 3 ಸಾವಿರ ನೀಡುವ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್ ಮೋಹನ್‌ ರೆಡ್ಡಿ ಬುಧವಾರ ಚಾಲನೆ ನೀಡಿದ್ದಾರೆ.

ಕಾಕಿನಾಡದ ರಂಗರಾಯ ಮೆಡಿಕಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ವೃದ್ಧರು, ವಿಧವೆಯರು ಸೇರಿದಂತೆ ಇತರರಿಗೆ ಈ ಯೋಜನೆಯಿಂದಾಗಿ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ADVERTISEMENT

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ಈವರೆಗೂ ನೀಡಲಾಗುತ್ತಿದ್ದ ಮಾಸಿಕ ₹2,750 ಅನ್ನು ₹ 3 ಸಾವಿರಕ್ಕೆ ಹೆಚ್ಚಿಸಲು ಆಂಧ್ರಪ್ರದೇಶ ಸಚಿವ ಸಂಪುಟ ಇತ್ತೀಚೆಗೆ ನಿರ್ಧರಿಸಿತ್ತು.

ಈ ಯೋಜನೆಯಿಂದ 66 ಲಕ್ಷ ಜನರಿಗೆ ಸಹಾಯವಾಗಲಿದೆ. ಈ ಹಿಂದಿನ ಚಂದ್ರಬಾಬು ನಾಯ್ಡು ಸರ್ಕಾರದ ಅವಧಿಯಲ್ಲಿ ಕೇವಲ ₹1 ಸಾವಿರ ನೀಡಲಾಗುತ್ತಿತ್ತು ಎಂದು ಜಗನ್‌ ತಿಳಿಸಿದ್ದಾರೆ.

ವೈಎಸ್‌ಆರ್‌ ಪಿಂಚಣಿ ಕಾಣುಕ ಎಂಬ ಈ ಯೋಜನೆಯಡಿ ಹಿರಿಯ ನಾಗರಿಕರು, ವಿಧವೆಯರು, ಒಂಟಿ ಮಹಿಳೆಯರು, ಎಚ್ಐವಿ ಪೀಡಿತರು ಸೇರಿದಂತೆ ಇತರರು ಫಲಾನುಭವಿಗಳಾಗಿರುತ್ತಾರೆ.

ಬಡವರಿಗೆ 22 ಲಕ್ಷ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ ಆದರೆ ವಿರೋಧ ಪಕ್ಷಗಳು ಇದರಲ್ಲೂ ಭ್ರಷ್ಟಚಾರವಾಗಿದೆ ಎಂದು ಆರೋಪಿಸುತ್ತಾರೆ ಎಂದು ಜಗನ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.