
ಪಿಟಿಐ
ರಾಮ್ ಬಾಬು
ಗುಂಟೂರು: ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ವೈಎಸ್‌ಆರ್‌ಸಿಪಿ ನಾಯಕ, ಮಾಜಿ ಸಚಿವ ಅಂಬಟಿ ರಾಮ್ ಬಾಬು ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಈ ನಡುವೆ, ಟಿಡಿಪಿ ನಾಯಕರು ಹಾಗೂ ಕಾರ್ಯಕರ್ತರು ರಾಮ್ ಬಾಬು ಅವರ ಮನೆ ಬಳಿ ಗಲಾಟೆ ಮಾಡಿದರಲ್ಲದೇ, ಮನೆ ಹಾಗೂ ಹಲವು ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಈ ದೃಶ್ಯಗಳಿರುವ ವಿಡಿಯೊ ಹರಿದಾಡಿದೆ.
‘ರಾಮ್‌ಬಾಬು ಅವರ ಕೊಲೆಗೆ ಯತ್ನಿಸಲಾಗಿದೆ. ಟಿಡಿಪಿ ಬೆಂಬಲಿಗರ ದಾಂದಲೆ ಪರಿಣಾಮ ಅವರ ಜೀವಕ್ಕೆ ಬೆದರಿಕೆ ಇದೆ’ ಎಂದು ವೈಎಸ್‌ಆರ್‌ಸಿ ಪಕ್ಷದ ಮುಖ್ಯಸ್ಥ ಜಗನಮೋಹನ್ ರೆಡ್ಡಿ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.