ADVERTISEMENT

ತೆಲಂಗಾಣ ಮಾದರಿಯಲ್ಲಿ ಆಂಧ್ರಪ್ರದೇಶದಲ್ಲೂ ಜಾತಿ ಗಣತಿ ನಡೆಸಬೇಕು: ವೈ.ಎಸ್.ಶರ್ಮಿಳಾ

ಪಿಟಿಐ
Published 4 ಫೆಬ್ರುವರಿ 2025, 12:39 IST
Last Updated 4 ಫೆಬ್ರುವರಿ 2025, 12:39 IST
ವೈ.ಎಸ್.ಶರ್ಮಿಳಾ
ವೈ.ಎಸ್.ಶರ್ಮಿಳಾ   

ಅಮರಾವತಿ: ನೆರೆಯ ತೆಲಂಗಾಣದಲ್ಲಿ ಜಾತಿಗಣತಿ ನಡೆಸಿದಂತೆ ರಾಜ್ಯದಲ್ಲಿಯೂ ಟಿಡಿಪಿ ನೇತೃತ್ವದ ಎನ್‌ಡಿಎ ಸರ್ಕಾರ ಜಾತಿ ಗಣತಿ ನಡೆಸಬೇಕು ಎಂದು ಆಂಧ್ರಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ವೈ.ಎಸ್‌ ಶರ್ಮಿಳಾ ಆಗ್ರಹಿಸಿದ್ದಾರೆ.

ತೆಲಂಗಾಣದ ಜಾತಿ ಗಣತಿ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ. ಇದೊಂದು ಐತಿಹಾಸಿಕ ಬೆಳವಣಿಗೆ ಮತ್ತು ದೇಶದ ಭವಿಷ್ಯಕ್ಕಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ದೂರದೃಷ್ಟಿಯ ಉದಾಹರಣೆಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ನಮ್ಮ ರಾಜ್ಯದಲ್ಲೂ (ಆಂಧ್ರಪ್ರದೇಶ) ಜಾತಿ ಗಣತಿ ನಡೆಯಬೇಕು. ರಾಜ್ಯದ 5.5 ಕೋಟಿ ಜನಸಂಖ್ಯೆಯಲ್ಲಿ ಹಿಂದುಳಿದವರ ಸಂಖ್ಯೆ ಕಂಡುಹಿಡಿಯಬೇಕು. ಜಾತಿ ತಾರತಮ್ಯಕ್ಕೆ ಒಳಗಾಗಿರುವ ದುರ್ಬಲ ವರ್ಗದವರ ಸಂಖ್ಯೆಯನ್ನೂ ಲೆಕ್ಕ ಹಾಕಬೇಕು’ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.