ADVERTISEMENT

ಚಂಡೀಗಢ: ಮೇಯರ್‌ ಸ್ಥಾನ ಗೆದ್ದ ಬಿಜೆಪಿ- ಎಎಪಿಗೆ ಮುಖಭಂಗ

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 12:31 IST
Last Updated 17 ಜನವರಿ 2023, 12:31 IST
ಚಂಡೀಗಢ ಮೇಯರ್‌ ಚುನಾವಣೆಯಲ್ಲಿ ಗೆದ್ದು ನೂತನ ಮೇಯರ್‌ ಆಗಿ ಆಯ್ಕೆ ಆದ ಬಿಜೆಪಿಯ ಅನೂಪ್‌ ಗುಪ್ತಾ ಜೊತೆ ಪಾಲಿಕೆ ಸದಸ್ಯರು ಸಂಭ್ರಮಿಸಿದರು  –ಪಿಟಿಐ ಚಿತ್ರ
ಚಂಡೀಗಢ ಮೇಯರ್‌ ಚುನಾವಣೆಯಲ್ಲಿ ಗೆದ್ದು ನೂತನ ಮೇಯರ್‌ ಆಗಿ ಆಯ್ಕೆ ಆದ ಬಿಜೆಪಿಯ ಅನೂಪ್‌ ಗುಪ್ತಾ ಜೊತೆ ಪಾಲಿಕೆ ಸದಸ್ಯರು ಸಂಭ್ರಮಿಸಿದರು  –ಪಿಟಿಐ ಚಿತ್ರ   

ಚಂಡೀಗಢ (ಪಿಟಿಐ): ಚಂಡೀಗಢದ ನೂತನ ಮೇಯರ್‌ ಆಗಿ ಬಿಜೆಪಿಯ ಅನೂಪ್‌ ಗುಪ್ತ ಅವರು ಮಂಗಳವಾರ ಚುನಾಯಿತರಾದರು.

ಎಎಪಿ ಅಭ್ಯರ್ಥಿ ಜಸ್ಬೀರ್‌ ಸಿಂಗ್‌ ವಿರುದ್ಧ ಕೇವಲ ಒಂದು ಮತದ ಅಂತರದಲ್ಲಿ ಅನೂಪ್‌ ಗೆದ್ದರು.

ಬಿಜೆಪಿ, ಎಎಪಿ ಮತ್ತು ಕಾಂಗ್ರೆಸ್‌ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಬಿಜೆಪಿ ಮತ್ತು ಎಎಪಿಯ ತಲಾ 14 ಕೌನ್ಸಿಲರ್‌ಗಳು ಇದ್ದಾರೆ. ಚಂಡೀಗಢ ಸಂಸದೆ ಕಿರಣ್‌ ಖೇರ್‌ ಅವರು ಪಾಲಿಕೆಯ ಪದನಿಮಿತ್ತ ಸದಸ್ಯೆಯಾಗಿದ್ದು ಅವರೂ ಮತ ಚಲಾಯಿಸಿದರು. ಎಎಪಿ ಜಸ್ಬೀರ್‌ ಸಿಂಗ್‌ 14 ಮತಗಳನ್ನು ಪಡೆದರೆ, ಬಿಜೆಪಿಯ ಅನೂಪ್‌ 15 ಮತಗಳನ್ನು ಪಡೆದು ಗೆಲುವು ಸಾಧಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.