ADVERTISEMENT

ಅತ್ಯಾಚಾರ ಸುಳ್ಳು, ಆ ಸಮಯದಲ್ಲಿ ನಾನು ಶ್ರೀಲಂಕಾದಲ್ಲಿದ್ದೆ: ‌ಅನುರಾಗ್‌ ಕಶ್ಯಪ್‌

ಪಿಟಿಐ
Published 2 ಅಕ್ಟೋಬರ್ 2020, 9:12 IST
Last Updated 2 ಅಕ್ಟೋಬರ್ 2020, 9:12 IST
ಅನುರಾಗ್‌ ಕಶ್ಯಪ್‌
ಅನುರಾಗ್‌ ಕಶ್ಯಪ್‌   

ಮುಂಬೈ: ಬಾಲಿವುಡ್‌ ನಟಿ ಪಾಯಲ್‌ ಘೋಷ್‌‌ ಮಾಡಿರುವ ಅತ್ಯಾಚಾರದ ಆರೋಪ ಸುಳ್ಳು. ಆಕೆ ಎಫ್‌ಐಆರ್‌ನಲ್ಲಿ ಪ್ರಸ್ತಾಪಿಸಿದ ದಿನ ನಾನು ದೇಶದಲ್ಲೇ ಇರಲಿಲ್ಲ ಎಂದು ಚಿತ್ರ ನಿರ್ಮಾಪಕ ಅನುರಾಗ್‌ ಕಶ್ಯಪ್‌ ಹೇಳಿದ್ದಾರೆ.

2013 ಆಗಸ್ಟ್‌ ತಿಂಗಳಿನಲ್ಲಿ ಸಿನಿಮಾ ಚಿತ್ರೀಕರಣಕ್ಕಾಗಿ ಅನುರಾಗ್‌ ಕಶ್ಯಪ್‌ ಅವರು ಶ್ರೀಲಂಕಾದಲ್ಲಿದ್ದರು. ಈ ಸಂಬಂಧಿತ ದಾಖಲೆಗಳನ್ನು ವಿಚಾರಣೆ ವೇಳೆ ಅಧಿಕಾರಿಗಳಿಗೆ ನೀಡಲಾಗಿದೆ ಎಂದುಕಶ್ಯಪ್ ಅವರ ಪರ ವಕೀಲರು ಮಾಹಿತಿ ನೀಡಿದ್ದಾರೆ.

ಕಶ್ಯಪ್‌ ಅವರು ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಪೊಲೀಸರು ಪ್ರಕರಣ ಸಂಬಂಧ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಹೇಳಿಕೆಯ ಪುಷ್ಟೀಕರಣಕ್ಕಾಗಿ ಸಂಬಂಧಿತ ದಾಖಲೆಗಳನ್ನು ಪೊಲೀಸರಿಗೆ ನೀಡಲಾಗಿದೆ. ಪಾಯಲ್‌ ‌ ಮಾಡಿರುವ ಎಲ್ಲಾ ಆಪಾದನೆಗಳು ಸುಳ್ಳು ಎಂದು ಕಶ್ಯಪ್‌ ಪರ ವಕೀಲರಾದ ಪ್ರಿಯಾಂಕಾ ಕಿಮ್ಮಾನಿ ಹೇಳಿಕೆ ನೀಡಿದ್ದಾರೆ.

ADVERTISEMENT

ಮುಂಬೈ ಪೊಲೀಸರುಗುರುವಾರ ಅನುರಾಗ್‌ ಕಶ್ಯಪ್‌ ಅವರನ್ನು 8 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು.

2013 ರ ಆಗಸ್ಟ್‌ನಲ್ಲಿ ನಿರ್ಮಾಪಕ ಅನುರಾಗ್‌ ಕಶ್ಯಪ್‌ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ನಟಿ ಪಾಯಲ್‌‌ ಅವರು ಸೆ.22 ರಂದು ವರ್ಸೋವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.