ADVERTISEMENT

ಕಾನೂನು ಬಾಹಿರವಾಗಿದ್ದರೆ, ED ವಿರುದ್ಧ ಕೋರ್ಟ್‌ಗೆ ಹೋಗಿ: ಎಎಪಿಗೆ ಬಿಜೆಪಿ ಸವಾಲು

ಪಿಟಿಐ
Published 2 ಫೆಬ್ರುವರಿ 2024, 14:25 IST
Last Updated 2 ಫೆಬ್ರುವರಿ 2024, 14:25 IST
ಮೀನಾಕ್ಷಿ ಲೇಖಿ
ಮೀನಾಕ್ಷಿ ಲೇಖಿ   

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನೋಟಿಸ್ ಕಾನೂನುಬಾಹಿರ ಎಂದೆನ್ನಿಸಿದ್ದರೆ, ಕೋರ್ಟ್ ಮೊರೆ ಹೋಗಲಿ ಎಂದು ಎಎಪಿಗೆ ಬಿಜೆಪಿ ಸವಾಲು ಹಾಕಿದೆ. 

ಹಣ ಅಕ್ರಮ ವರ್ಗಾವಣೆ ಪ್ರಕರಣದ ಕುರಿತು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಇ.ಡಿ ಐದನೇ ಬಾರಿಗೆ ನೋಟಿಸ್ ನೀಡಿದೆ. ಆದರೆ, ಈ ಕುರಿತ ವಿಚಾರಣೆಗೆ ಶುಕ್ರವಾರವೂ ಹಾಜರಾಗದ ಕೇಜ್ರಿವಾಲ್ ಅವರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡರು. 

ಇದಕ್ಕೆ ಸಂಸತ್ತಿನ ಆವರಣದಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ, ‘ಭ್ರಷ್ಟಾಚಾರ ನಡೆದಿದೆ ಎಂಬುದು ಅರವಿಂದ ಕೇಜ್ರಿವಾಲ್ ಅವರಿಗೆ ಗೊತ್ತಿದೆ. ಇದೇ ಕಾರಣಕ್ಕೆ ಅವರು ಇ.ಡಿ ವಿಚಾರಣೆಗೆ ಹಾಜರಾಗದೆ, ನುಣುಚಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.