ADVERTISEMENT

ಲಡಾಖ್‌ಗೆ ಭೇಟಿ ನೀಡಿದ ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ

ಪಿಟಿಐ
Published 23 ಜೂನ್ 2020, 7:45 IST
Last Updated 23 ಜೂನ್ 2020, 7:45 IST
ಎಂ.ಎಂ. ನರವಾಣೆ (ಎಎನ್‌ಐ ಟ್ವಿಟರ್‌ ಚಿತ್ರ)
ಎಂ.ಎಂ. ನರವಾಣೆ (ಎಎನ್‌ಐ ಟ್ವಿಟರ್‌ ಚಿತ್ರ)   

ನವದೆಹಲಿ: ಸೇನಾ ಮುಖ್ಯಸ್ಥ ಎಂ.ಎಂ.ನರವಾಣೆ ಅವರು ಮಂಗಳವಾರ ಲಡಾಖ್‌‌ಗೆ ಭೇಟಿ ನೀಡಿದ್ದಾರೆ.

ಗಡಿಯಲ್ಲಿ ಕಳೆದ ಆರು ವಾರಗಳಿಂದ ನಡೆಯುತ್ತಿರುವ ಚೀನಾದ ಸೇನೆ ಜಮಾವಣೆ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ನರವಾಣೆ ಅವರು ಮೂರು ಸ್ಥಳಗಳಲ್ಲಿ ಸೈನಿಕರ ಜೊತೆ ಸಂವಾದ ನಡೆಸಲಿದ್ದಾರೆ.

ADVERTISEMENT

ಜೂನ್‌ 15ರ ತಡರಾತ್ರಿ ಗಾಲ್ವನ್‌‌ ಕಣಿವೆಯ ವಾಸ್ತವ ಗಡಿರೇಖೆ ಬಳಿ ಭಾರತ– ಚೀನಾ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಇದರಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾದರು. ಇದಾದ ಬಳಿಕ ಭಾರತ–ಚೀನಾ ಗಡಿ ಪ್ರದೇಶದಲ್ಲಿ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.