ADVERTISEMENT

ಹೆಲಿಕಾಪ್ಟರ್‌ ಪತನ; ಪೈಲಟ್‌ಗಳ ಸಾವು

ಪಿಟಿಐ
Published 27 ಸೆಪ್ಟೆಂಬರ್ 2019, 18:43 IST
Last Updated 27 ಸೆಪ್ಟೆಂಬರ್ 2019, 18:43 IST
ಪತನಗೊಂಡ ಚೀತಾ ಹೆಲಿಕಾಪ್ಟರ್‌ ಅವಶೇಷಗಳು ಪಿಟಿಐ ಚಿತ್ರ
ಪತನಗೊಂಡ ಚೀತಾ ಹೆಲಿಕಾಪ್ಟರ್‌ ಅವಶೇಷಗಳು ಪಿಟಿಐ ಚಿತ್ರ   

ನವದೆಹಲಿ: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್‌ ಶುಕ್ರವಾರ ಮಧ್ಯಾಹ್ನ ಭೂತಾನ್‌ನ ಪೂರ್ವಭಾಗದಲ್ಲಿ ನೆಲಕ್ಕುರುಳಿದ್ದು, ಇಬ್ಬರೂ ಪೈಲಟ್‌ಗಳು ಮೃತಪಟ್ಟಿದ್ದಾರೆ.

ಒಂದೇ ಎಂಜಿನ್‌ನ ಈ ಹೆಲಿಕಾಪ್ಟರ್‌ ಅರುಣಾಚಲ ಪ್ರದೇಶದ ಕಿರ್ಮುವಿನಿಂದ ಭೂತಾನ್‌ನ ಯೊನ್‌ಫುಲಕ್ಕೆ ತೆರಳುತ್ತಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ ಸಂಪರ್ಕವನ್ನು ಕಡಿದುಕೊಂಡಿತು.

ಭಾರತೀಯ ಸೇನೆಯ ಒಬ್ಬರು, ರಾಯಲ್ ಭೂತಾನ್‌ ಸೇನೆಯ ಇನ್ನೊಬ್ಬ ಪೈಲಟ್‌ ಮೃತಪಟ್ಟಿದ್ದಾರೆ. ಸಂಪರ್ಕ ಕಡಿತವಾದ ಹಿಂದೆಯೇ ಹುಡುಕಾಟ ಆರಂಭವಾಗಿದ್ದು, ಅವಶೇಷಗಳು ಯೊನ್‌ಫುಲದಲ್ಲಿ ಪತ್ತೆಯಾಯಿತು ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.