ಮುರಳಿ ನಾಯ್ಕ್
(ಚಿತ್ರ ಕೃಪೆ– X/@ncbn)
ಹೈದರಾಬಾದ್: ಪಾಕ್ ಪಡೆಗಳ ಜೊತೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಆಂಧ್ರಪ್ರದೇಶದ ಶ್ರೀಸತ್ಯಸಾಯಿ ಜಿಲ್ಲೆ ಕಲ್ಲಿತಾಂಡಾ ಬುಡಕಟ್ಟ ಪ್ರದೇಶದ ನಿವಾಸಿ, ಯೋಧ ಮುರಳಿ ನಾಯ್ಕ್ ಮೃತಪಟ್ಟಿದ್ದಾರೆ.
27 ವರ್ಷ ವಯಸ್ಸಿನ, ಅವಿವಾಹಿತರಾಗಿದ್ದ ಇವರು ಕೆಲದಿನಗಳ ಹಿಂದಷ್ಟೇ ಭಾರತದ ಗಡಿಯಲ್ಲಿ ಸೇವೆಗೆ ನಿಯೋಜಿತರಾಗಿದ್ದರು. ಪಾರ್ಥೀವ ಶರೀರ ಶನಿವಾರ ಗ್ರಾಮಕ್ಕೆ ತಲುಪವ ನಿರೀಕ್ಷೆಗಳಿವೆ.
ಅಗ್ನಿವೀರರಾಗಿ ಸೇನೆಗೆ ಸೇರ್ಪಡೆಗೊಂಡಿದ್ದ ಅವರು ನಾಸಿಕ್‌ನಲ್ಲಿ ತರಬೇತಿ ಪಡೆದಿದ್ದರು. ಇವರು, ಕೃಷಿ ಕೂಲಿ ಕಾರ್ಮಿಕರಾದ ಮುದವತ್ ಶ್ರೀರಾಮ್ ನಾಯ್ಕ್, ಜ್ಯೊತಿಭಾಯಿ ಅವರ ಏಕೈಕ ಪುತ್ರ.
ಸಾವಿನ ಸುದ್ದಿ ತಿಳಿದಂತೆ ತಾಯಿಯ ರೋದನ ಮುಗಿಲುಮುಟ್ಟಿತ್ತು. ಮೃತ ಯೋಧನ ಮನೆಗೆ ರಾಜ್ಯದ ಸಚಿವೆ ಎಸ್.ಸವಿತಾ ಭೇಟಿ ನೀಡಿದ್ದು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.