ADVERTISEMENT

ಐಎಸ್‌ಗೆ ಸೂಕ್ಷ್ಮ ದಾಖಲೆಗಳ ಪೂರೈಕೆಸೇನೆಯ ವ್ಯಕ್ತಿ ಸೇರಿ ಇಬ್ಬರ ಬಂಧನ

ಪಿಟಿಐ
Published 15 ಜುಲೈ 2021, 13:47 IST
Last Updated 15 ಜುಲೈ 2021, 13:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ (ಪಿಟಿಐ): ಪಾಕಿಸ್ತಾನದ ಗೂಢಚಾರ ಸಂಸ್ಥೆ ‘ಐಎಸ್‌‘ಗೆ ಸೇನೆಯ ವರ್ಗೀಕೃತ ದಾಖಲೆಗಳನ್ನು ಪೂರೈಸುತ್ತಿದ್ದ ಆರೋಪದಡಿ ಸೇನೆಯ ಸಿಬ್ಬಂದಿಯೊಬ್ಬರು ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

‘ಸೂಕ್ಷ್ಮ, ಪ್ರಮುಖ ದಾಖಲೆಗಳನ್ನು ಪೋಖ್ರಾನ್‌ನ ಸೇನಾ ನೆಲೆಯ ಬಳಿ, 34 ವರ್ಷದ ತರಕಾರಿ ವ್ಯಾಪಾರಿಯೊಬ್ಬ ಐಎಸ್‌ಗೆ ಒಪ್ಪಿಸುವಾಗ ಸಿಕ್ಕಿಬಿದ್ದಿದ್ದರಿಂದಾಗಿ ಈ ಪ್ರಕರಣ ಗೊತ್ತಾಗಿತ್ತು. ಪತ್ತೆಯಾದ ದಾಖಲೆಗಳು ಸೇನೆಯ ಪ್ರಮುಖ, ವರ್ಗೀಕರಿಸಿದ ದಾಖಲೆಗಳಾಗಿವೆ’ ಎಂದು ಸೇನೆಯ ಮುಖ್ಯ ಕಚೇರಿಯೂ ದೃಢಪಡಿಸಿದೆ.

ರಾಜಸ್ಥಾನದ ಪೋಖ್ರಾನ್‌ನಲ್ಲಿ ತರಕಾರಿ ಪೂರೈಕೆದಾರ ಹಬೀಬ್ ಖಾನ್‌ ಎಂಬವನನ್ನು ಬಂಧಿಸಲಾಗಿದೆ. ಮುಖ್ಯ ದಾಖಲೆಗಳನ್ನು ನೆರೆಯ ದೇಶಕ್ಕೆ ಪೂರೈಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಬಂಧಿಸಿದ್ದು, ಈ ಬಗ್ಗೆ ಮೊಕದ್ದಮೆ ದಾಖಲಿಸಲಾಗಿದೆ’ ಎಂದು ವಿಶೇಷ ಕಮಿಷನರ್‌ (ಅಪರಾಧ) ಪ್ರವೀರ್ ರಂಜನ್‌ ಅವರು ತಿಳಿಸಿದರು.

ADVERTISEMENT

‘ಇದರಲ್ಲಿ ಸೇನೆಯ ಪರಂಜಿತ್‌ ಅವರ ಪಾತ್ರವಿರುವುದೂ ತನಿಖೆಯಲ್ಲಿ ಗೊತ್ತಾಗಿದೆ. ಪರಂಜಿತ್‌ ಪೋಖ್ರಾನ್‌ನಲ್ಲಿ ಕೆಲಸ ಮಾಡುವಾಗ ಇವರ ಸಂಪರ್ಕಕ್ಕೆ ಬಂದಿದ್ದ ರೆಹಮಾನ್‌ ದಾಖಲೆಗಳನ್ನು ಒದಗಿಸಲು ಕೋರಿದ್ದರು. ಪರಂಜಿತ್‌ ಸದ್ಯ ಆಗ್ರಾ ಕಂಟೋನ್ಮೆಂಟ್‌ನಲ್ಲಿ ಕ್ಲರ್ಕ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.