ADVERTISEMENT

ಹಿಮಪಾತ:1,500 ಮಂದಿ ಪ್ರವಾಸಿಗರ ರಕ್ಷಣೆ

ಪಿಟಿಐ
Published 28 ಡಿಸೆಂಬರ್ 2019, 11:05 IST
Last Updated 28 ಡಿಸೆಂಬರ್ 2019, 11:05 IST
   

ಗ್ಯಾಂಗ್ಟಕ್‌: ಭಾರಿ ಹಿಮಪಾತದ ಕಾರಣ ಪೂರ್ವ ಸಿಕ್ಕಿಂನ ನಾಥು ಲಾದಲ್ಲಿ ಸಿಲುಕಿಕೊಂಡಿದ್ದ 1,500 ಮಂದಿ ಪ್ರವಾಸಿಗರನ್ನು ಸೇನೆ ರಕ್ಷಣೆ ಮಾಡಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಗ್ಯಾಂಗ್ಟಕ್‌ನಿಂದ 300 ವಾಹನಗಳಲ್ಲಿ ಹೊರಟಿದ್ದ ಸುಮಾರು 1,500 ರಿಂದ 1,700 ಮಂದಿ ಪ್ರವಾಸಿಗರು 13ನೇ ಮೈಲು ಮತ್ತು ನಾಥು ಲಾ ನಡುವಿನ ಜವಾಹರ್‌ಲಾಲ್‌ ನೆಹರು ರಸ್ತೆಯ ವಿವಿಧೆಡೆ ಶುಕ್ರವಾರ ಸಿಲುಕಿಕೊಂಡಿದ್ದರು ಎಂದಿದ್ದಾರೆ.

‘ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 1,500 ಮಂದಿ ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದ್ದು, ಇವರಲ್ಲಿ 570 ಮಂದಿಗೆ ಸೇನೆಯ ಶಿಬಿರದಲ್ಲಿ ಆಶ್ರಯ ನೀಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಪ್ರವಾಸಿಗರಿಗೆ ಆಹಾರ, ಔಷಧಿ ಹಾಗೂ ಬೆಚ್ಚಗಿನ ಬಟ್ಟೆಗಳನ್ನು ನೀಡಲಾಗಿದೆ. ರಸ್ತೆಗೆ ಬಿದ್ದಿರುವ ಹಿಮವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.