
ಲೇಹ್/ಜಮ್ಮು: ಸಶಸ್ತ್ರ ಪಡೆಗಳ ಕಾರ್ಯಾಚರಣೆಗೆ ನೆರವಾಗಲು ಲೇಹ್‌ನಲ್ಲಿ ಅತ್ಯಾಧುನಿಕ ‘ನ್ಯೂ ಜೆನರೇಷನ್ ವೆಹಿಕಲ್ ಲಾಜಿಸ್ಟಿಕ್ಸ್ ಹಬ್’ ತಲೆ ಎತ್ತಿದೆ. ಸೇನಾ ಕಾರ್ಯಾಚರಣೆಗೆ ಬೇಕಾದ ಸರಕುಗಳ ಗೋದಾಮು ಆಗಿ ಇದು ಕಾರ್ಯ ನಿರ್ವಹಿಸುತ್ತದೆ.
ಜನರಲ್ ಆಫೀಸರ್ ಕಮಾಂಡಿಂಗ್, ಭಾರತೀಯ ಸೇನೆಯ ಫೈರ್ ಆ್ಯಂಡ್ ಫ್ಯುರಿ ಕೋರ್, ಲೆಪ್ಟಿನಂಟ್ ಜನರಲ್ ಹಿತೇಶ್ ಭಲ್ಲಾ ಅವರು ‘ನ್ಯೂ ಜೆನರೇಷನ್ ವೆಹಿಕಲ್’ (ಎನ್‌ಜಿವಿ) ಲಾಜಿಸ್ಟಿಕ್ಸ್ ಹಬ್’ ಅನ್ನು ಗುರುವಾರ ಉದ್ಘಾಟನೆ ಮಾಡಿದರು. ‘ಇದು ಎತ್ತರದ ಪ್ರದೇಶದಲ್ಲಿ ಕಾರ್ಯಾಚರಣೆಯ ಕ್ಷಮತೆಯನ್ನು ಹೆಚ್ಚಿಸುವ ಪ್ರಯತ್ನವಾಗಿದೆ’ ಎಂದರು.
ಪ್ರಮುಖ ಗಡಿ ಪ್ರದೇಶಗಳಾದ ಕಾರ್ಗಿಲ್, ತಾಂಗತ್ಸೆ ಹಾಗೂ ನ್ಯೋಮಾ ಸೇರಿದಂತೆ ಲಡಾಖ್‌ನ ಭಾರತ– ಪಾಕಿಸ್ತಾನ ಹಾಗೂ ಭಾರತ– ಚೀನಾ ಗಡಿಗಳಲ್ಲಿ ಕಾರ್ಯಾಚರಣೆಗೆ ಅನುಕೂಲವಾಗಲು ‘ಸ್ಯಾಟ್‌ಲೈಟ್ ಹಬ್’ ಆರಂಭಿಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ.
ಇಲ್ಲಿನ ದುರ್ಗಮ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವುದು, ಅದರಲ್ಲೂ ಚಳಿಗಾಲದ ಸಂದರ್ಭದಲ್ಲಿ ಸೇನೆಗೆ ಕಷ್ಟಕರವಾಗಿರುತ್ತದೆ. ಈ ಸಮಸ್ಯೆಯನ್ನು ಬಗೆಹರಿಸುವ ಗುರಿಯೊಂದಿಗೆ ಲಾಜಿಸ್ಟಿಕ್ಸ್ ಹಬ್ ನಿರ್ಮಿಸಲಾಗಿದೆ.
ಸೇನೆಯ ಪ್ರಮುಖ 6 ಉದ್ಯಮ ಪಾಲುದಾರ ಕಂಪನಿಗಳ ಪ್ರತಿನಿಧಿಗಳನ್ನು ಇಲ್ಲಿ ನಿಯೋಜಿಸಲಾಗುವುದು. ಇದು ತಾಂತ್ರಿಕ ಬೆಂಬಲ ಮತ್ತು ಸಮಸ್ಯೆಗಳ ತ್ವರಿತ ಪರಿಹಾರವನ್ನು ಖಚಿತಪಡಿಸುತ್ತದೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.