ADVERTISEMENT

ಶಬರಿಮಲೆಗೆ ತೆರಳಲು ಮುಂದಾದ ಹಿಂದೂ ಐಕ್ಯ ವೇದಿಕೆ ನಾಯಕಿ ಬಂಧನ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 7:05 IST
Last Updated 17 ನವೆಂಬರ್ 2018, 7:05 IST
   

ಕೊಚ್ಚಿ: ಶಬರಿಮಲೆಗೆ ತೆರಳದಂತೆ ಪೊಲೀಸರು ಮಾಡಿದ ಮನವಿ ತಿರಸ್ಕರಿಸಿ ಮುನ್ನಡೆಯಲು ಯತ್ನಿಸಿದಹಿಂದೂ ಐಕ್ಯ ವೇದಿಕೆಯ ನಾಯಕಿ ಕೆ.ಪಿ. ಶಶಿಕಲಾ ಅವರನ್ನು ಬಂಧಿಸಲಾಗಿದೆ. ಅವರ ಬಂಧನ ವಿರೋಧಿಸಿರುವಬಲಪಂಥೀಯ ಸಂಘಟನೆಗಳು ಕೇರಳ ಬಂದ್‌ಗೆ ಕರೆ ನೀಡಿವೆ.

ಶಬರಿಮಲೆ ಸನ್ನಿಧಾನಂ ಸಮೀಪದ ಮರಕ್ಕುಟ್ಟಂ ಎಂಬಲ್ಲಿ ಶುಕ್ರವಾರ ಮಧ್ಯರಾತ್ರಿ 1.30ರ ವೇಳೆಗೆ ಅವರನ್ನು ಬಂಧಿಸಲಾಗಿದೆ. ಬಂಧನಕ್ಕೂ ಮೊದಲು ವಾಪಸ್‌ ತೆರಳುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ, ಪೊಲೀಸರ ಮನವಿಗೆ ಸೊಪ್ಪುಹಾಕದ ಅವರು, ಶನಿವಾರ ಬೆಳಿಗ್ಗೆ ದರ್ಶನ ಮಾಡದ ಹೊರತು ತಾವು ಹಿಂದಿರುಗುವುದಿಲ್ಲ ಎಂದು ಹಠ ಮಾಡಿದ್ದಾರೆ.

ADVERTISEMENT

ಬಳಿಕ ಅವರನ್ನು ರನ್ನಿ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದೆ. ಬೆಂಬಲಿಗರು ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ಕೈಗೊಂಡಿದ್ದಾರೆ.

ಈ ವೇಳೆಹಿಂದೂ ಐಕ್ಯ ವೇದಿಕೆಯ ನಾಯಕ ಭಾರ್ಗವರಮ್‌, ಶಬರಿಮಲೆ ಆಚಾರ ಸಂರಕ್ಷಣಾ ಸಮಿತಿಯ ರಾಜ್ಯ ಕಾರ್ಯದರ್ಶಿ ಪೃಥ್ವಿಪಾಲ ಹಾಗೂ ಬಿಜೆಪಿ ಎಸ್‌.ಟಿ. ಮೋರ್ಚಾ ರಾಜ್ಯ ಮುಖ್ಯಸ್ಥ ಪಿ.ಸುಧೀರ್‌ ಅವರನ್ನು ವಶಕ್ಕೆ ಪಡೆಯಲಾಗಿದೆ. ಪ್ರತಿಭಟನೆಗೆಬಿಜೆಪಿ ತನ್ನ ಬೆಂಬಲವನ್ನು ಘೋಷಿಸಿದೆ.ತಮ್ಮ ನಾಯಕರ ಬಂಧನವು ಪಕ್ಷದ ಮೇಲೆ ಯಾವುದೇ ಪ್ರಭಾವ ಉಂಟುಮಾಡುವುದಿಲ್ಲ ಎಂದು ಬಿಜೆಪಿ ಹೇಳಿದೆ.

ಪ್ರತಿಭಟನಾಕಾರರು ಕೆಎಸ್‌ಆರ್‌ಟಿಸಿ ಬಸ್‌ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.

ಸಂಬಂಧಪಟ್ಟ ಲೇಖನಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.