ADVERTISEMENT

ನೀರವ್‌ ಮೋದಿಗಾಗಿ ಮುಂಬೈ ಜೈಲಿನ ವಿಶೇಷ ಕೊಠಡಿ ಸಜ್ಜು

ಪಿಟಿಐ
Published 26 ಫೆಬ್ರುವರಿ 2021, 7:42 IST
Last Updated 26 ಫೆಬ್ರುವರಿ 2021, 7:42 IST
ನೀರವ್‌ ಮೋದಿ ಭಾರತದಿಂದ ಪಲಾಯನ ಮಾಡಿದಾಗ ಕಾಂಗ್ರೆಸ್‌ ನಡೆಸಿದ್ದ ಪ್ರತಿಭಟನೆ ವೇಳೆ ಕಂಡು ಬಂದ ದೃಶ್ಯ (ಸಂಗ್ರಹ ಚಿತ್ರ- ಎಎಫ್‌ಪಿ)
ನೀರವ್‌ ಮೋದಿ ಭಾರತದಿಂದ ಪಲಾಯನ ಮಾಡಿದಾಗ ಕಾಂಗ್ರೆಸ್‌ ನಡೆಸಿದ್ದ ಪ್ರತಿಭಟನೆ ವೇಳೆ ಕಂಡು ಬಂದ ದೃಶ್ಯ (ಸಂಗ್ರಹ ಚಿತ್ರ- ಎಎಫ್‌ಪಿ)   

ಮುಂಬೈ: ಬಹುಕೋಟಿ ವಂಚನೆ ಆರೋಪ ಎದುರಿಸುತ್ತಿರುವ ಉದ್ಯಮಿ ನೀರವ್‌ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್ ಕೋರ್ಟ್‌ ಒಪ್ಪಿಗೆ ನೀಡುತ್ತಿದ್ದಂತೆಯೇ, ಇತ್ತ ಮುಂಬೈನ ಆರ್ಥರ್‌ ರಸ್ತೆಯ ಜೈಲಿನಲ್ಲಿ ಅವರಿಗಾಗಿ ವಿಶೇಷ ಕೊಠಡಿಯನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ನೀರವ್‌ ಮೋದಿಯನ್ನು ಜೈಲಿನಲ್ಲಿರಿಸಲು ಸಿದ್ಧತೆಗಳು ಪೂರ್ಣಗೊಂಡಿವೆ. ಅವರನ್ನು ಮುಂಬೈಗೆ ಕರೆತಂದ ನಂತರ, ಜೈಲಿನ ಬ್ಯಾರಕ್ ಸಂಖ್ಯೆ 12ರ ಮೂರು ಕೊಠಡಿಗಳ ಪೈಕಿ ಒಂದರಲ್ಲಿ ಇರಿಸಲಾಗುವುದು. ಇದು ಅತಿ ಹೆಚ್ಚು ಭದ್ರತೆ ಹೊಂದಿರುವ ಬ್ಯಾರಕ್ ಆಗಿದೆ‘ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ (ಪಿಎನ್‌ಬಿ) ₹ 13,500 ಕೋಟಿ ವಂಚಿಸಿರುವ ಆರೋಪ ಎದುರಿಸುತ್ತಿರುವ ವಜ್ರದ ವ್ಯಾಪಾರಿ ನೀರವ್‌ ಮೋದಿ ವಿದೇಶಕ್ಕೆ ಪರಾರಿಯಾಗಿದ್ದರು. ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್‌ ಕೋರ್ಟ್‌ ಗುರುವಾರ ಒಪ್ಪಿಗೆ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.