ADVERTISEMENT

ಅರುಣಾಚಲ ಪ್ರದೇಶ: ಪ್ರವಾಹಕ್ಕೆ ಕೊಚ್ಚಿ ಹೋದ ಸೇತುವೆ  

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 16:00 IST
Last Updated 3 ಜುಲೈ 2022, 16:00 IST

ಇಟಾನಗರ (ಪಿಟಿಐ): ಅರುಣಾಚಲ ಪ್ರದೇಶದ ಕುರುಂಗ್ ಕುಮೆ ಜಿಲ್ಲೆಯಲ್ಲಿ ಚೀನಾ ಗಡಿಗೆ ಹೊಂದಿಕೊಂಡಿರುವ ಎರಡು ಆಯಕಟ್ಟಿನ ಸ್ಥಳಗಳನ್ನು ಸಂಪರ್ಕಿಸುವ ಬೈಲಿ ಸೇತುವೆಯು ಪ್ರವಾಹದಲ್ಲಿ ಕೊಚ್ಚಿಹೋಗಿದೆ ಎಂದು ಗಡಿ ರಸ್ತೆಗಳ ಸಂಸ್ಥೆಯ (ಬಿಆರ್‌ಒ) ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಕೊರೊರು ಗ್ರಾಮದ ಬಳಿ ಓಯಾಂಗ್ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆಯು ಜಿಲ್ಲಾ ಕೇಂದ್ರ ಕೊಲೊರಿಂಗ್ ಮತ್ತು ಡಾಮಿನ್‌ ನಡುವೆ ಪ್ರಮುಖ ಸಂಪರ್ಕ ಸೇತುವೆಯಾಗಿದೆ. ಇದು ಭಾರತ-ಚೀನಾ ಗಡಿಯಲ್ಲಿ ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು.

ಬಿಆರ್‌ಒ ಪ್ರಾಜೆಕ್ಟ್ ಅರುಣಾಂಕ್ ಮುಖ್ಯ ಇಂಜಿನಿಯರ್ ಬ್ರಿಗೇಡಿಯರ್‌ ಅನಿರುದ್ಧ್ ಎಸ್. ಕನ್ವರ್ ಅವರು ಕೊಲೊರಿಯಾಂಗ್-ಹುರಿ ರಸ್ತೆಯಲ್ಲಿನ ಸೇತುವೆಯುಲೀಯಿಂದ ಸುಮಾರು ಒಂದು ಕಿ.ಮೀ ದೂರಕ್ಕೆಶನಿವಾರ ಪ್ರವಾಹದಲ್ಲಿ ಕೊಚ್ಚಿಹೋಗಿದೆ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.