ADVERTISEMENT

ರೈಲಿನಲ್ಲಿ ಶಿವನಿಗೆ ಸೀಟು: ಪ್ರಧಾನಿಗೆ ಸಂವಿಧಾನದ ಮುನ್ನುಡಿ ಕಳುಹಿಸಿದ ಓವೈಸಿ

ಏಜೆನ್ಸೀಸ್
Published 17 ಫೆಬ್ರುವರಿ 2020, 6:04 IST
Last Updated 17 ಫೆಬ್ರುವರಿ 2020, 6:04 IST
ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ   

ನವದೆಹಲಿ:ಮಹಾಕಾಲ್ ಎಕ್ಸ್‌ಪ್ರೆಸ್ ರೈಲಿನ ಬಿ5 ಬೋಗಿಯ 64ನೇ ಸೀಟನ್ನು ಭಗವಾನ್ ಶಿವನಿಗೆ ಮೀಸಲಿಟ್ಟ ಕುರಿತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥಅಸಾದುದ್ದೀನ್ ಓವೈಸಿ ಆಕ್ಷೇಪ ಸೂಚಿಸಿದ್ದಾರೆ.

ವರದಿಯ ಟ್ವೀಟೊಂದನ್ನು ಉಲ್ಲೇಖಿಸಿ ಪ್ರಧಾನಿ ಕಚೇರಿಯನ್ನು ಟ್ಯಾಗ್‌ ಮಾಡಿ ಟ್ವೀಟ್ ಮಾಡಿರುವ ಓವೈಸಿ, ಸಂವಿಧಾನದ ಮುನ್ನಡಿಯ ಪ್ರತಿಯನ್ನು ಲಗತ್ತಿಸಿದ್ದಾರೆ.

ವಾರಾಣಸಿ–ಇಂದೋರ್ ನಡುವೆ ಸಂಚರಿಸುವಮಹಾಕಾಲ್ ಎಕ್ಸ್‌ಪ್ರೆಸ್‌ಗೆ ವಾರಾಣಸಿಯಲ್ಲಿಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದ್ದರು. ಈ ರೈಲು ಮೂರು ಜ್ಯೋತಿರ್ಲಿಂಗಗಳಿರುವ ಕ್ಷೇತ್ರಗಳನ್ನು (ಇಂದೋರ್ ಬಳಿಯ ಓಂಕಾರೇಶ್ವರ, ಉಜ್ಜೈನಿಯ ಮಹಾಕಾಲೇಶ್ವರ ಮತ್ತು ವಾರಾಣಸಿಯ ಕಾಶಿ ವಿಶ್ವನಾಥ) ಸಂಪರ್ಕಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.