ADVERTISEMENT

ಕೊರೊನಾ ಬಿಕ್ಕಟ್ಟಿನಿಂದ ಬಂದ್‌ ಆಗಿದ್ದ 2,000 ಪ್ರವಾಸಿ ತಾಣ ಪ್ರವೇಶಕ್ಕೆ ಮುಕ್ತ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 11:47 IST
Last Updated 6 ಜುಲೈ 2020, 11:47 IST
ಕೆಂಪು ಕೋಟೆ
ಕೆಂಪು ಕೋಟೆ   

ನವದೆಹಲಿ: ಕೊರೊನಾ ಬಿಕ್ಕಟ್ಟಿನಿಂದ ಬಂದ್‌ ಆಗಿದ್ದ 2,000 ಪಾರಂಪರಿಕ ತಾಣಗಳನ್ನು ಪ್ರವಾಸಿಗರ ಭೇಟಿಗೆ ಮುಕ್ತಗೊಳಿಸಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ತಿಳಿಸಿದೆ.

ಕೆಂಪು ಕೋಟೆ,ಕುತುಬ್ ಮಿನಾರ್, ಚಾರ್ಮಿನಾರ್‌ ಮತ್ತುಗೋಲ್ಕೊಂಡ ಕೋಟೆ ಸೇರಿದಂತೆ ಹಲವು ತಾಣಗಳನ್ನು ಪ್ರವಾಸಿಗರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ.

ಆಗ್ರಾದಲ್ಲಿ ಕೊರೊನಾ ಸೋಂಕು ವಿಪರೀತ ಏರಿಕೆಯಾಗುತ್ತಿರುವುದರಿಂದ ತಾಜ್‌ ಮಹಲ್‌ ಸೇರಿದಂತೆ ಅಲ್ಲಿಯ ಪುರಾತತ್ವ ಸ್ಥಳಗಳ ಪ್ರವೇಶದ ಮೇಲಿನ ನಿರ್ಬಂಧ ಮುಂದುವರಿಯಲಿದೆ.

ADVERTISEMENT

ಈ ಸ್ಥಳಗಳಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುವುದು ಕಡ್ಡಾಯವಾಗಿದ್ದು, ಗುಂಪು ಛಾಯಾಚಿತ್ರ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ. ಹೆಚ್ಚಿನ ಜನರಿಗೆ ಪ್ರವೇಶವೂ ಇರುವುದಿಲ್ಲ. ನಗದುರಹಿತ (ಡಿಜಿಟಲ್‌)ಪಾವತಿ ಮೂಲಕ ಟಿಕೆಟ್‌ ಖರೀದಿಸಬೇಕು. ಪ್ರವಾಸಿಗರು ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗುವಂತಿಲ್ಲ.ಮಾಸ್ಕ್‌ ಧರಿಸುವುದರ ಜೊತೆಗೆ ಶುಚಿತ್ವವನ್ನು ಕಾಪಾಡಬೇಕು ಎಂದು ತಿಳಿಸಲಾಗಿದೆ. ಕಂಟೈನ್‌ಮೆಂಟ್‌ ವಲಯಗಳಲ್ಲಿರುವ ಪಾರಂಪರಿಕ ತಾಣಗಳು ಬಂದ್‌ ಆಗಿರಲಿವೆ.

ಆಗ್ರಾದಲ್ಲಿ ಕಳೆದ ನಾಲ್ಕು ದಿನಗಳಲ್ಲಿ 55 ಸೋಂಕು ಪ್ರಕರಣ ವರದಿಯಾಗಿವೆ. ಇಲ್ಲಿ 71 ಕಂಟೈನ್‌ಮೆಂಟ್‌ ವಲಯಗಳಿವೆ. ಹಾಗಾಗಿ, ತಾಜ್ ಮಹಲ್, ಆಗ್ರಾ ಕೋಟೆ, ಸಿಕಂದರ, ಅಕ್ಬರ್‌ ಸಮಾಧಿ ಸಮಾಧಿ ಸೇರಿದಂತೆ ನಗರದ ಎಲ್ಲಾ ಸ್ಮಾರಕಗಳನ್ನು ಬಫರ್ ವಲಯಗಳು ಎಂದು ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.