ADVERTISEMENT

ಶ್ರೀನಗರದ ಟ್ಯುಲಿಪ್‌ ಉದ್ಯಾನ: ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ

ಪಿಟಿಐ
Published 26 ಮಾರ್ಚ್ 2025, 15:40 IST
Last Updated 26 ಮಾರ್ಚ್ 2025, 15:40 IST
ಟ್ಯುಲಿಪ್‌ ಉದ್ಯಾನ
ಟ್ಯುಲಿಪ್‌ ಉದ್ಯಾನ   

ಶ್ರೀನಗರ: ಶ್ರೀನಗರದಲ್ಲಿರುವ ಏಷ್ಯಾದ ಅತಿದೊಡ್ಡ ಟ್ಯುಲಿಪ್‌ ಉದ್ಯಾನವು ಸಾರ್ವಜನಿಕರ ವೀಕ್ಷಣೆಗೆ ಬುಧವಾರದಿಂದ ಮುಕ್ತವಾಗಿದೆ.

ದಾಲ್‌ ಸರೋವರ ಮತ್ತು ಜಬಾರ್‌ವಾನ್‌ ಬೆಟ್ಟಗಳ ನಡುವೆ ಇರುವ ಇಂದಿರಾ ಗಾಂಧಿ ಸ್ಮಾರಕ ಟ್ಯುಲಿಪ್‌ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಜಮ್ಮು–ಕಾಶ್ಮೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ಚಾಲನೆ ನೀಡಿದರು.

55 ಎಕರೆ ವಿಸ್ತೀರ್ಣ ಹೊಂದಿರುವ ಉದ್ಯಾನದಲ್ಲಿ ಸುಮಾರು 74 ತಳಿಯ 17 ಲಕ್ಷ ಟ್ಯುಲಿಪ್‌ ಹೂವುಗಳು ಅರಳಿವೆ.

ADVERTISEMENT
ಟ್ಯುಲಿಪ್ ಉದ್ಯಾನದಲ್ಲಿ ಜನರು ಫೋಟೊ ತೆಗೆಸಿಕೊಂಡರು – ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.