ADVERTISEMENT

ದೆಹಲಿ ಸ್ಫೋಟ ಬೆಂಬಲಿಸಿ ಪೋಸ್ಟ್‌; ಅಸ್ಸಾಂನಲ್ಲಿ ಮತ್ತೊಬ್ಬ ವ್ಯಕ್ತಿಯ ಬಂಧನ

ಪಿಟಿಐ
Published 16 ನವೆಂಬರ್ 2025, 5:10 IST
Last Updated 16 ನವೆಂಬರ್ 2025, 5:10 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಗುವಾಹಟಿ: ದೆಹಲಿ ಸ್ಫೋಟವನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಹಾಕಿದ್ದಕ್ಕಾಗಿ ಅಸ್ಸಾಂನಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಈ ಸಂಬಂಧ ಒಟ್ಟು ಬಂಧಿತರ ಸಂಖ್ಯೆ 21ಕ್ಕೆ ತಲುಪಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.

ಭಯೋತ್ಪಾದಕರಿಗೆ ಆನ್‌ಲೈನ್‌ನಲ್ಲಿ ಬೆಂಬಲ ನೀಡುವ ಯಾವುದೇ ವ್ಯಕ್ತಿಯನ್ನು ಬಿಡಲಾಗುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ADVERTISEMENT

ಶನಿವಾರ ಸಂಜೆ ತಡವಾಗಿ ಎಕ್ಸ್ ಪೋಸ್ಟ್‌ನಲ್ಲಿ ಪೋಸ್ಟ್ ಹಂಚಿಕೊಂಡ ಶರ್ಮಾ, "ಮತ್ತೊಬ್ಬ ರಾಷ್ಟ್ರವಿರೋಧಿಯನ್ನು ಅಸ್ಸಾಂ ಪೊಲಿಸರು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 21ಕ್ಕೆ ತಲುಪಿದೆ ಎಂದು ತಿಳಿಸಿದ್ದಾರೆ.

‘ದೆಹಲಿ ಸ್ಫೋಟದ ಹಿಂದಿನ ಭಯೋತ್ಪಾದಕರಿಗೆ ಆನ್‌ಲೈನ್‌ನಲ್ಲಿ ಬೆಂಬಲ ವ್ಯಕ್ತಪಡಿಸುವ ಯಾರನ್ನೂ ನಾವು ಸಹಿಸುವುದಿಲ್ಲ’ಎಂದು ಅವರು ಹೇಳಿದ್ದಾರೆ.

ಬಂಧಿತರಲ್ಲಿ ಕಾಮರೂಪ ಮತ್ತು ಬೊಂಗೈಗಾಂವ್‌ನ ತಲಾ ಮೂವರು, ಚಿರಾಂಗ್, ಲಖಿಂಪುರ ಮತ್ತು ಬಾರ್ಪೇಟಾದಿಂದ ತಲಾ ಇಬ್ಬರು ಹಾಗೂ ದರ್ರಾಂಗ್, ಗೋಲ್‌ಪಾರ, ನಲ್ಬಾರಿ, ಹೈಲಕಂಡಿ, ಹೊಜೈ, ದಕ್ಷಿಣ ಸಲ್ಮಾರಾ, ಕೊಕ್ರಝಾರ್, ಬಜಾಲಿ ಮತ್ತು ಧುಬ್ರಿಯಿಂದ ತಲಾ ಒಬ್ಬರು ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸೋಮವಾರ ಸಂಜೆ ಕೆಂಪು ಕೋಟೆ ಮೆಟ್ರೊ ನಿಲ್ದಾಣದ ಬಳಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಕಾರೊಂದು ಸ್ಫೋಟಗೊಂಡು 13 ಜನರು ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು.

ದಾಳಿಗೆ ಬೆಂಬಲ ನೀಡುವ ಯಾರ ವಿರುದ್ಧವೂ ರಾಜ್ಯ ಸರ್ಕಾರ ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.