ADVERTISEMENT

ಅಸ್ಸಾಂ: ರಾಜೀವ್‌ಗಾಂಧಿ ನ್ಯಾಷನಲ್‌ ಪಾರ್ಕ್‌ ಮರುನಾಮಕರಣಕ್ಕೆ ಸಂಪುಟ ನಿರ್ಧಾರ

ಪಿಟಿಐ
Published 2 ಸೆಪ್ಟೆಂಬರ್ 2021, 9:44 IST
Last Updated 2 ಸೆಪ್ಟೆಂಬರ್ 2021, 9:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗುವಾಹಟಿ: ಅಸ್ಸಾಂನ ರಾಜೀವ್‌ಗಾಂಧಿ ನ್ಯಾಷನಲ್‌ ಪಾರ್ಕ್‌ನ ಹೆಸರನ್ನು ಒರಂಗ್ ನ್ಯಾಷನಲ್‌ ಪಾರ್ಕ್‌ ಎಂದು ಬದಲಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.

ಜಲಸಂಪನ್ಮೂಲ ಸಚಿವ ಪೀಯೂಷ್‌ ಹಜಾರಿಕಾ ಅವರು ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ.

‘ಆದಿವಾಸಿಗಳು ಹಾಗೂ ಚಹ ತೋಟಗಳಲ್ಲಿ ದುಡಿಯುವ ಬುಡಕಟ್ಟು ಜನರ ಒತ್ತಾಸೆಯ ಮೇರೆ ಈ ನಿರ್ಧಾರ ಕೈಗೊಳ್ಳಲಾಗಿದೆ’ ಅವರು ಹೇಳಿದ್ದಾರೆ.

ADVERTISEMENT

ದರಾಂಗ್ ಮತ್ತು ಸೋನಿತ್‌ಪುರ ಜಿಲ್ಲೆಗಳ ಮೂಲಕ ಹರಿಯುವ ಬ್ರಹ್ಮಪುತ್ರ ನದಿಯ ಉತ್ತರ ತೀರದಲ್ಲಿ ಈ ಉದ್ಯಾನ ಇದೆ. 79.28 ಚದರ ಕಿ.ಮೀ ವಿಸ್ತೀರ್ಣದ ಈ ಅರಣ್ಯವನ್ನು 1985ರಲ್ಲಿ ವನ್ಯಜೀವಿ ಧಾಮ, ನಂತರ 1999ರಲ್ಲಿ ರಾಷ್ಟ್ರೀಯ ಉದ್ಯಾನ ಎಂಬುದಾಗಿ ಘೋಷಿಸಲಾಯಿತು.

ರಾಯಲ್ ಬೆಂಗಾಲ್‌ ಟೈಗರ್, ಘೇಂಡಾಮೃಗ, ಆನೆಗಳಿಗೆ ಈ ಅರಣ್ಯ ಪ್ರಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.