ADVERTISEMENT

ಜುಲೈನಲ್ಲಿ ಸಂಸತ್ತಿಗೆ ಮಾಹಿತಿ ನೀಡಿದ್ದ ಕೇಂದ್ರ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 20:15 IST
Last Updated 27 ಡಿಸೆಂಬರ್ 2019, 20:15 IST
ಅಸ್ಸಾಂನ ಗೋಲಪಾರದಲ್ಲಿ ನಿರ್ಮಿಸುತ್ತಿರುವ ಬಂಧನ ಕೇಂದ್ರ (2019ರ ಸೆಪ್ಟೆಂಬರ್ 1ರಂದು ತೆಗೆಯಲಾದ ಚಿತ್ರ) –ರಾಯಿಟರ್ಸ್ ಚಿತ್ರ
ಅಸ್ಸಾಂನ ಗೋಲಪಾರದಲ್ಲಿ ನಿರ್ಮಿಸುತ್ತಿರುವ ಬಂಧನ ಕೇಂದ್ರ (2019ರ ಸೆಪ್ಟೆಂಬರ್ 1ರಂದು ತೆಗೆಯಲಾದ ಚಿತ್ರ) –ರಾಯಿಟರ್ಸ್ ಚಿತ್ರ   

ಅಕ್ರಮ ವಲಸಿಗರನ್ನು ಇರಿಸಲು ಅಸ್ಸಾಂನಲ್ಲಿ ಈಗಾಗಲೇ ಬಂಧನ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ ಎಂದು ಜುಲೈನಲ್ಲಿ ಕೇಂದ್ರ ಸರ್ಕಾರವು ಸಂಸತ್ತಿನ ಉಭಯ ಸದನಗಳಿಗೆ ಮಾಹಿತಿ ನೀಡಿತ್ತು.ಬಂಧನ ಕೇಂದ್ರಗಳಲ್ಲಿ ವಾಸಿಸುವ ಜನರಿಗೆ ಗುಣಮಟ್ಟದ ಜೀವನ ನಡೆಸಲು ಅನುಕೂಲವಾಗುವ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ‘ಮಾದರಿ ಬಂಧನ ಕೇಂದ್ರ ಕೈಪಿಡಿ’ ರೂಪಿಸಲಾಗಿದೆ. ಇದನ್ನು ಎಲ್ಲಾ ಸರ್ಕಾರಗಳಿಗೆ ಕಳುಹಿಸಲಾಗಿದೆ ಎಂದುಗೃಹಸಚಿವಾಲಯವು ಸಂಸತ್ತಿಗೆ ತಿಳಿಸಿತ್ತು.

ದೇಶದ ವಿವಿಧೆಡೆ ಇರುವ ಬಂಧನ ಕೇಂದ್ರಗಳ ವಿವರ

* ಅಸ್ಸಾಂ:ರಾಜ್ಯದ ಆರು ಜಿಲ್ಲೆಗಳಲ್ಲಿ ಈಗಾಗಲೇ ಬಂಧನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ 10 ಪ್ರತ್ಯೇಕ ಬಂಧನ ಕೇಂದ್ರಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ

ADVERTISEMENT

*ಮಹಾರಾಷ್ಟ್ರ:ಮಹಾರಾಷ್ಟ್ರದ ಮೊದಲ ಬಂಧನ ಕೇಂದ್ರ ನಿರ್ಮಾಣಕ್ಕೆ ಹಿಂದಿನ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಜಾಗ ಗುರುತಿಸಿ ದ್ದರು. ಆದರೆ ನೂತನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ‘ರಾಜ್ಯದಲ್ಲಿ ಬಂಧನ ಕೇಂದ್ರಗಳನ್ನು ನಿರ್ಮಿಸುವುದಿಲ್ಲ’ ಎಂದಿದ್ದಾರೆ.

*ಪಶ್ಚಿಮ ಬಂಗಾಳ:ಕ್ರಿಮಿನಲ್ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ಬಂಧಿಸಿರುವ ವಿದೇಶಿ ಪ್ರಜೆಗಳನ್ನು ಇರಿಸುವ ಸಲುವಾಗಿ ಎರಡು ಬಂಧನ ಕೇಂದ್ರಗಳನ್ನು ಪಶ್ಚಿಮ ಬಂಗಾಳ ಸರ್ಕಾರನಿರ್ಮಿಸುತ್ತಿದೆ.

*ಕರ್ನಾಟಕ:ಅಕ್ರಮ ವಲಸಿಗರಿಗೆ ಸಂಬಂಧಿಸಿದ ಪ್ರಕರಣವೊಂದು ಕರ್ನಾ ಟಕ ಹೈಕೋರ್ಟ್‌ನಲ್ಲಿ ಕಳೆದ ನವೆಂಬರ್‌ನಲ್ಲಿ ವಿಚಾರಣೆಗೆ ಬಂದಿತ್ತು. ನ್ಯಾಯಾಲಯಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಸರ್ಕಾರ, ‘ಅಕ್ರಮ ವಲಸಿಗರ ಬಂಧ ನಕ್ಕೆ ಕೇಂದ್ರಗಳನ್ನು ನಿರ್ಮಿಸುವಂತೆ ಕರ್ನಾಟಕ ಸರ್ಕಾರಕ್ಕೆ 2014ರಲ್ಲಿ ಸೂಚಿ ಸಲಾಗಿತ್ತು. 2018ರಲ್ಲಿ ಮತ್ತೆ ನೆನಪಿಸಲಾಗಿತ್ತು’ ಎಂದು ಮಾಹಿತಿ ನೀಡಿತ್ತು.

ದೇಶದಲ್ಲಿಯೇ ಅತಿ ದೊಡ್ಡ ಬಂಧನ ಕೇಂದ್ರ ಇರುವುದು ಅಸ್ಸಾಂನಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.