ADVERTISEMENT

ಜುಬಿನ್‌ ಸಾವಿನ ಪ್ರಕರಣ: ಸಿಂಗಪುರ ತಲುಪಿದ ತನಿಖಾಧಿಕಾರಿಗಳು

ಪಿಟಿಐ
Published 20 ಅಕ್ಟೋಬರ್ 2025, 14:37 IST
Last Updated 20 ಅಕ್ಟೋಬರ್ 2025, 14:37 IST
ಜುಬೀನ್‌ ಗರ್ಗ್‌
ಜುಬೀನ್‌ ಗರ್ಗ್‌   

ಗುವಾಹಟಿ: ಗಾಯಕ ಜುಬಿನ್‌ ಗರ್ಗ್ ಸಾವಿನ ಪ್ರಕರಣದ ತನಿಖೆಯ ಭಾಗವಾಗಿ ಅಸ್ಸಾಂನ ಇಬ್ಬರು ಹಿರಿಯ ಪೊಲೀಸ್‌ ಅಧಿಕಾರಿಗಳು ಸಿಂಗಪುರಕ್ಕೆ ಸೋಮವಾರ ತಲುಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಸ್ಸಾಂನ ವಿಶೇಷ ತನಿಖಾ ತಂಡ (ಎಸ್‌ಐಟಿ)ಯು ಗರ್ಗ್‌ ಶಂಕಾಸ್ಪದ ಸಾವಿನ ಕುರಿತು ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ 60ಕ್ಕೂ ಹೆಚ್ಚು ಎಫ್‌ಐಆರ್‌ಗಳು ದಾಖಲಾಗಿವೆ. 

ಸಿಐಡಿಯ ವಿಶೇಷ ಡಿಜಿಪಿ ಮುನ್ನಾ ಪ್ರಸಾದ್‌ ಗುಪ್ತಾ ಮತ್ತು ಟಿಟಾಬೋರ್‌ ಉಪ ಜಿಲ್ಲಾ ಎಸ್‌ಪಿ ತರುಣ್‌ ಗೋಯೆಲ್‌ ಈಗಾಗಲೇ ಸಿಂಗಪುರ ತಲುಪಿದ್ದಾರೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ಎಸ್‌ಐಟಿ ತಂಡವನ್ನು ಗುಪ್ತಾ ಅವರು ಮುನ್ನಡೆಸುತ್ತಿದ್ದು, ಒಂಬತ್ತು ಸದಸ್ಯರ ಪೈಕಿ ತರುಣ್‌ ಗೋಯೆಲ್‌ ಕೂಡ ಒಬ್ಬರು.

ಸಿಂಗಪುರದಲ್ಲಿ ನಡೆಯುತ್ತಿರುವ ತನಿಖೆಯ ಕುರಿತು ಅಧಿಕಾರಿ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಇಬ್ಬರು ಅಧಿಕಾರಿಗಳು, ಗರ್ಗ್‌ ಅವರು ಕೊನೆಯುಸಿರೆಳೆದ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಸಿಂಗಪುರ ಪೊಲೀಸರೊಂದಿಗೆ ಪ್ರಕರಣದ ಕುರಿತು ಚರ್ಚಿಸಲಿದ್ದಾರೆ ಎಂದು ಮೂಲವೊಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.