
ನವದೆಹಲಿ: ಮುಂದಿನ ವರ್ಷ ಚುನಾವಣೆ ನಡೆಯಲಿರುವ ಅಸ್ಸಾಂನಲ್ಲಿ ಮತದಾರರ ಪಟ್ಟಿಯ ‘ವಿಶೇಷ ಪರಿಷ್ಕರಣೆ’ ನಡೆಸಲು ಚುನಾವಣಾ ಆಯೋಗ ಮುಂದಾಗಿದೆ. ‘ಅನುಮಾನಾಸ್ಪದ ಮತದಾರ’ರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವುದೇ ಈ ಎಸ್‌ಐಆರ್‌ನ ಮುಖ್ಯ ಉದ್ದೇಶ ಎಂದು ಆಯೋಗ ಹೇಳಿದೆ. ಈ ಪ್ರಕ್ರಿಯೆಯು ಇದೇ ಶನಿವಾರದಿಂದ ಆರಂಭವಾಗಲಿದ್ದು, 2026ರ ಫೆಬ್ರುವರಿ 10ಕ್ಕೆ ಅಂತಿಮ ಮತದಾರರ ಪಟ್ಟಿಯನ್ನು ಆಯೋಗ ಬಿಡುಗಡೆ ಮಾಡಲಿದೆ.
ಪರಿಷ್ಕರಣೆ ಹೇಗಿರಲಿದೆ?
ಬೂತ್ ಮಟ್ಟದ ಅಧಿಕಾರಿಗಳು ಮತದಾರರಿಗೆ ತಮ್ಮ ಮಾಹಿತಿಗಳನ್ನು ನಮೂದು ಮಾಡಲು ಮತದಾರರ ಚೀಟಿ ನೀಡುವುದಿಲ್ಲ. ಮತದಾರರ ಚೀಟಿಯನ್ನು ಮೊದಲೇ ತುಂಬಿರಲಾಗುತ್ತದೆ. ಇದರಲ್ಲಿ ಬದಲಾವಣೆಗಳಿದ್ದರೆ ಮಾಡಲಾಗುತ್ತದೆ
ಮತದಾರರ ಪಟ್ಟಿಯಲ್ಲಿ ಕಳಪೆ ಗುಣಮಟ್ಟದ ಚಿತ್ರಗಳನ್ನು, ಮನುಷ್ಯನ ಚಿತ್ರದ ಬದಲಿಗೆ ಇರುವ ಇತರೆ ಚಿತ್ರಗಳನ್ನು ಬದಲಿಸುವುದು
ಮನೆ ಸಂಖ್ಯೆ ‘0’ ಎಂದು ಇರುವ ಮನೆಗಳಿಗೆ ‘ಎನ್1’, ‘ಎನ್2’ ಎಂದು ನೀಡಲಾಗುವುದು
ಕಳೆದ ಬಾರಿ ನಡೆಸಲಾದ ಎಸ್‌ಐಆರ್‌ನಿಂದ ಸಿದ್ಧವಾದ ಮತದಾರರ ಪಟ್ಟಿಯನ್ನು ಈ ಬಾರಿ ತುಲನೆ ಮಾಡುವುದಿಲ್ಲ
ಎರಡು ಅಥವಾ ಮೂರು ಬಾರಿ ಮತದಾರರ ಪಟ್ಟಿಯಲ್ಲಿ ಹೆಸರು ಇರುವವರನ್ನು, ಮೃತರಾದವರನ್ನು ಮತ್ತು ಬೇರೆಡೆ ಸ್ಥಳಾಂತಗೊಂಡವರನ್ನು ಪಟ್ಟಿಯಿಂದ ಅಳಿಸುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.