ADVERTISEMENT

ರಾಜಸ್ಥಾನದಲ್ಲಿ ಶೇ. 72.7, ತೆಲಂಗಾಣದಲ್ಲಿ ಶೇ. 67 ಮತದಾನ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 14:28 IST
Last Updated 7 ಡಿಸೆಂಬರ್ 2018, 14:28 IST
   

ನವದೆಹಲಿ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಶೇ. 72.7 ಮತದಾನವಾಗಿದ್ದು, ತೆಲಂಗಾಣದಲ್ಲಿ ಶೇ.67 ಮತದಾನ ಆಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ರಾಜಸ್ಥಾನದಲ್ಲಿ ಮತದಾನದ ವೇಳೆ ಅಹಿತಕರ ಘಟನೆಗಳೂ ವರದಿಯಾಗಿದೆ. ಇಲ್ಲಿ ಸಿಕಾರ್ ಜಿಲ್ಲೆಯ ಫತೇಪುರ್ ಸುಭಾಷ್ ಶಾಲೆಯ ಮತಗಟ್ಟೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ವಾಗ್ವಾದ ಸಂಘರ್ಷಕ್ಕೆ ತಿರುಗಿದೆ. ನಕಲಿ ಮತದಾರರನ್ನು ಮತಗಟ್ಟೆಗೆ ಪ್ರವೇಶಿಸುತ್ತಿದ್ದಾರೆ ಎಂದು ಆರೋಪಿಸಿ ಎರಡು ಗುಂಪುಗಳು ವಾಗ್ವಾದ ಮಾಡಿ, ಆಮೇಲೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಅಲ್ಲಿನ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಈ ಸಂಘರ್ಷದಲ್ಲಿ 2 ಬೈಕ್‍ಗಳಿಗೆ ಬೆಂಕಿ ಹಚ್ಚಿದ್ದು, ಜನರನ್ನು ಪೊಲೀಸರು ಚದುರಿಸಿದ್ದಾರೆ .

ADVERTISEMENT

ಇಲ್ಲಿನ ಬಿಕಾನೀರ್ ಜಿಲ್ಲೆಯ 172ನೇ ಮತಗಟ್ಟೆಯಲ್ಲಿ ಕೇಂದ್ರ ಸಚಿವ ಹಾಗು ಹಿರಿಯ ಬಿಜೆಪಿ ನೇತಾರ ಅರ್ಜುನ್ ರಾಮ್ ಮೇಘ್ವಾಲ್ ಮೂರುವರೆ ತಾಸು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ.ಆ ಮತಗಟ್ಟೆಯಲ್ಲಿ ಇವಿಎಂ ದೋಷ ಕಂಡು ಬಂದಿದ್ದರಿಂದ ಮತದಾನ ವಿಳಂಬವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.