ADVERTISEMENT

2 ಸಾವಿರದೊಳಗಿನ ಅಂತರದಲ್ಲಿ ಗೆದ್ದವರು 37 ಮಂದಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 20:15 IST
Last Updated 12 ಡಿಸೆಂಬರ್ 2018, 20:15 IST

ನವದೆಹಲಿ: ಛತ್ತೀಸಗಡ, ರಾಜಸ್ಥಾನ ಹಾಗೂ ಮಧ್ಯಪ್ರದೇಶ ರಾಜ್ಯಗಳ ಚುನಾವಣೆಯಲ್ಲಿ 2000ಕ್ಕಿಂತ ಕಡಿಮೆ ಮತಗಳ ಅಂತರದಿಂದ 37 ಅಭ್ಯರ್ಥಿಗಳು ಗೆದ್ದಿದ್ದಾರೆ.

ಮಧ್ಯಪ್ರದೇಶದಲ್ಲಿ 17 ಅಭ್ಯರ್ಥಿಗಳು, ರಾಜಸ್ಥಾನದಲ್ಲಿ 16 ಹಾಗೂ ಛತ್ತೀಸಗಡದಲ್ಲಿ ನಾಲ್ವರು2000 ಮತಗಳಿಗಿಂತ ಕಡಿಮೆ ಅಂತರದಿಂದ ಜಯಗಳಿಸಿದ್ದಾರೆ. ಮಧ್ಯಪ್ರದೇಶದಲ್ಲಿಸರಳ ಬಹುಮತ ಪಡೆಯಲು ಕಾಂಗ್ರೆಸ್‌ಗೆ ಇನ್ನೂ ಎರಡು ಸ್ಥಾನಗಳು ಬೇಕಿತ್ತು.

ಮಧ್ಯಪ್ರದೇಶದ ಗ್ವಾಲಿಯರ್‌ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರವೀಣ ಪಾಠಕ್‌ ಕೇವಲ 121 ಮತಗಳ ಅಂತರದಿಂದ ಬಿಜೆಪಿಯ ನಾರಾಯಣ್‌ ಸಿಂಗ್‌ ಕುಶ್ವಾಹ ಅವರನ್ನು ಸೋಲಿಸಿದ್ದಾರೆ. ರಾಜಸ್ಥಾನದ ಅಸಿಂದ್‌ ಕ್ಷೇತ್ರದಲ್ಲಿ ಬಿಜೆಪಿಯ ಜಬ್ಬರ್‌ ಸಿಂಗ್‌ ಸಂಖ್ಲಾ ಅವರು ಕಾಂಗ್ರೆಸ್‌ನ ಮನೀಶ್‌ ಮೆವಾರ ಅವರನ್ನು 154 ಮತಗಳ ಅಂತರದಿಂದ ಮಣಿಸಿದ್ದಾರೆ. ಛತ್ತೀಸಗಡದ ಧಮ್‌ತರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಗುರುಮುಖ್‌ ಸಿಂಗ್‌ ಹೋರಾ ಅವರು ಬಿಜೆಪಿಯ ರಂಜನ ಸಾಹು ವಿರುದ್ಧ 464 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.