ADVERTISEMENT

Live | ಪಶ್ಚಿಮ ಬಂಗಾಳ: ಶಿಷ್ಯ ಸುವೇಂದು ಅಧಿಕಾರಿ ಎದುರು 1,956 ಮತಗಳ ಅಂತರದಿಂದ ಸೋತ ಮಮತಾ ಬ್ಯಾನರ್ಜಿ

4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶಗಳ ಮತ ಎಣಿಕೆ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ತಮಿಳುನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಎಲ್‌ಡಿಎಫ್ ಮುನ್ನಡೆ ಸಾಧಿಸಿವೆ. ಅಸ್ಸಾಂನಲ್ಲಿ ಎನ್‌ಡಿಎ ಬಹುಮತ್ತ ದಾಪುಗಾಲಿಟ್ಟಿದೆ.

​ಪ್ರಜಾವಾಣಿ ವಾರ್ತೆ
Published 3 ಮೇ 2021, 2:28 IST
Last Updated 3 ಮೇ 2021, 2:28 IST

ಶಿಷ್ಯ ಸುವೇಂದು ಎದುರು 1,956 ಮತಗಳ ಅಂತರದಿಂದ ಸೋತ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಂಡಿರುವ ಸಿಎಂ ಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರದಲ್ಲಿ ತಮ್ಮ ಶಿಷ್ಯ ಸುವೇಂದು ಅಧಿಕಾರಿ ವಿರುದ್ಧ 1,956 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಮಾಹಿತಿ ಪ್ರಕಾರ, ಸುವೇಂದು ಅಧಿಕಾರಿ 1,10,764 ಮತಗಳನ್ನು ಪಡೆದರೆ, ಮಮತಾ ಬ್ಯಾನರ್ಜಿ 1,08,808 ಮತಗಳನ್ನು ಪಡೆದು 1,956 ಮತಗಳ ಅಂತರದಿಂದ ಸೋತಿದ್ದಾರೆ.

ಈ ಮೊದಲು ಮತ ಎಣಿಕೆಯ ಅಂತ್ಯದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಗೆದ್ದಿದ್ದಾರೆ ಎಂದು ಘೋಷಿಸಲಾಗಿತ್ತು. ಆದರೆ, ಬಳಿಕ ಚುನಾವಣಾ ಆಯೋಗವು ಮಮತಾ ಸೋತಿದ್ದಾರೆ ಎಂದು ಹೇಳಿತು.

ADVERTISEMENT

ಮತ ಎಣಿಕೆಯ ಮೊದಲ ಸುತ್ತಿನಲ್ಲೇ ಸುವೇಂದು 8,000 ಮತಗಳ ಮುನ್ನಡೆ ಪಡೆದಿದ್ದರು. ಬಳಿಕ, ಮಮತಾ ಬ್ಯಾನರ್ಜಿ ಕಮ್ ಬ್ಯಾಕ್ ಮಾಡಿದರು. ಅಲ್ಪ ಅಂತರದಲ್ಲೇ ಹಾವು–ಏಣಿ ಆಟ ಮುಂದುವರೆದಿತ್ತು. ಅಂತಿಮವಾಗಿ ಗುರುವಿನ ವಿರುದ್ಧ ಶಿಷ್ಯನ ಗೆಲುವಾಗಿದೆ.

ಈ ಮೊದಲು ಮಮತಾ ಬ್ಯಾನರ್ಜಿ ಗೆದ್ದಿದ್ದಾರೆ ಎಂದು ಘೋಷಿಸಲಾಗಿತ್ತು. ಆದರೆ, ಬಳಿಕ ಚುನಾವಣಾ ಆಯೋಗವು ಮಮತಾ ಸೋತಿದ್ಧರೆ ಎಂದು ಹೇಳಿತು.

ಮತ ಎಣಿಕೆ ಮೊದಲ ಸುತ್ತಿನಲ್ಲೇ ಸುವೇಂದು 8,000 ಮತಗಳ ಮುನ್ನಡೆ ಪಡೆದಿದ್ದರು. ಬಳಿಕ, ಮಮಮತಾ ಬ್ಯಾನರ್ಜಿ ಕಮ್ ಬ್ಯಾಕ್ ಮಾಡಿದರು. ಅಲ್ಪ ಅಂತರದಲ್ಲೇ ಹಾವು–ಏಣಿ ಆಟ ಮುಂದುವರೆದಿತ್ತು. ಅಂತಿಮವಾಗಿ ಗುರುವಿನ ವಿರುದ್ಧ ಶಿಷ್ಯನ ಗೆಲುವಾಗಿದೆ.

ನಂದಿಗ್ರಾಮದ ಸೋಲಿನ ಬಗ್ಗೆ ಚಿಂತಿಸಬೇಡಿ, ನಾನು ನಂದಿಗ್ರಾಮದಲ್ಲಿ ಚಳವಳಿ ನಡೆಸಿದ್ದ ಕಾರಣ ಅದಕ್ಕಾಗಿ ಸೆಣಸಿದೆ. ಪರವಾಗಿಲ್ಲ. ನಂದಿಗ್ರಾಮದ ಜನರು ತಮಗೆ ಬೇಕಾದ ಯಾವುದೇ ತೀರ್ಪು ನೀಡಲಿ, ನಾನು ಅದನ್ನು ಸ್ವೀಕರಿಸುತ್ತೇನೆ. ಈ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾವು 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ ಮತ್ತು ಬಿಜೆಪಿ ಚುನಾವಣೆಯಲ್ಲಿ ಸೋತಿದೆ ಎಂದು ಮಮತಾ ಹೇಳಿದ್ದಾರೆ.
 

ಪುದುಚೇರಿ: ಎನ್‌ಡಿಎ ಅಧಿಕಾರಕ್ಕೆ, ಕಾಂಗ್ರೆಸ್‌ ಸೋಲು

ಕೇಂದ್ರಾಡಳಿತ ಪ್ರದೇಶದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವಲ್ಲಿ ವಿಪಲವಾಗಿದೆ. ಬಿಜೆಪಿ, ಎನ್‌ಆರ್‌ಸಿ, ಎಐಎಡಿಎಂಕೆ ಒಕ್ಕೂಟದ ಎನ್‌ಡಿಎ ಅಧಿಕಾರಕ್ಕೆ ಬಂದಿದೆ. 

ಫಲಿತಾಂಶ: ಎನ್‌ಡಿಎ –16, ಕಾಂಗ್ರೆಸ್‌ –9, ಇತರೆ –5

ಅಸ್ಸಾಂನಲ್ಲಿ ಕೇಸರಿ ಕಮಾಲ್‌: ಎರಡನೇ ಅವಧಿಗೆ ಬಿಜೆಪಿ ಅಧಿಕಾರಕ್ಕೆ...

ಅಸ್ಸಾಂನಲ್ಲಿ ಮತ್ತೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್‌ ಕೂಡ ಗಮನಾರ್ಹ ಸಾಧನೆ ಮಾಡುವ ಮೂಲಕ ಪ್ರಮುಖ ವಿರೋಧ ಪಕ್ಷವಾಗಿದೆ.

ಫಲಿತಾಂಶ: ಬಿಜೆಪಿ –73, ಕಾಂಗ್ರೆಸ್‌ –52, ಇತರೆ –1

ಕೇರಳದಲ್ಲಿ ಕೆಂಪು ಸುನಾಮಿ: ಬಿಜೆಪಿ ಶೂನ್ಯ ಸಂಪಾದನೆ

ಕೇರಳದಲ್ಲಿ ಎಡ ಪಕ್ಷಗಳು ಭರ್ಜರಿ ಗೆಲುವು ದಾಖಲಿಸಿವೆ. ಈ ಸಲ ಯುಡಿಎಫ್‌ ಮತ್ತೆ ವಿರೋಧ ಪಕ್ಷದ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. 5 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದ ಬಿಜೆಪಿ ಶೂನ್ಯ ಸಂಪಾದನೆ ಮಾಡಿದೆ.

ಫಲಿತಾಂಶ: ಎಲ್‌ಡಿಎಫ್‌–99, ಯುಡಿಎಫ್‌ –41, ಎನ್‌ಡಿಎ–00

ನಂದಿಗ್ರಾಮದಲ್ಲಿ ಇನ್ನು ಕೆಲವು ಮತಗಳ ಎಣಿಕೆ ಬಾಕಿ

ನಂದಿಗ್ರಾಮದಲ್ಲಿ ಇನ್ನು ಕೆಲವು ಮತಗಳ ಎಣಿಕೆ ಬಾಕಿ ಇದೆ. ಮತ ಎಣಿಕೆ ಪೂರ್ಣವಾದ ಬಳಿಕ ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣೆ ಆಯೋಗ ತಿಳಿಸಿದೆ

ಮಮತಾಗೆ ನಂದಿಗ್ರಾಮದಲ್ಲಿ 1622 ಮತಗಳ ಅಂತರದ ಸೋಲು: ಮರು ಎಣಿಕೆಗೆ ಟಿಎಂಸಿ ಅರ್ಜಿ

ತಮಿಳುನಾಡು: 153 ಸ್ಥಾನಗಳಲ್ಲಿ ಡಿಎಂಕೆ ಗೆಲುವು, ಸ್ಟಾಲಿನ್‌ ಅಧಿಕಾರಕ್ಕೆ...

ಕೇರಳ’ ಮೆಟ್ರೋಮ್ಯಾನ್ ಶ್ರೀಧರನ್ ಸೋಲು

ನಂದಿಗ್ರಾಮ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿಗೆ 1200 ಮತಗಳ ಅಂತರದ ಗೆಲುವು

ತಮಿಳುನಾಡು ಚುನಾವಣೆ ಫಲಿತಾಂಶ: ರಘುರಾಮನ್ ಮುನ್ನಡೆ

ಡಿಎಂಕೆ ಅಭ್ಯರ್ಥಿ ಎ ಆರ್‌ಆರ್‌ ರಘುರಾಮನ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಎಐಎಡಿಎಂಕೆ ಅಭ್ಯರ್ಥಿ ಆರ್.ಕೆ.ರವಿಂದ್ರನ್ ಅವರಿಗಿಂತ 6194 ಮತಗಳ ಅಂತರದಿಂದ ಮುಂದಿದ್ದಾರೆ.
ರಘುರಾಮನ್‌ 48,346 ಮತಗಳನ್ನು ಪಡೆದಿದ್ದರೆ, ರವಿಚಂದ್ರನ್ 42,152 ಮತಗಳನ್ನು ಪಡೆದಿದ್ದಾ

ಕೇರಳ: ಉಮ್ಮನ್ ಚಾಂಡಿ ಮುನ್ನಡೆ 

ಪುತ್ತುಪಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಉಮ್ಮನ್ ಚಾಂಡಿ ಅವರು 39,192 ಮತಗಳನ್ನು ಪಡೆದಿದ್ದು, ತಮ್ಮ ಸಮೀಪದ ಪ್ರತಿಸ್ಪರ್ಧಿ ಸಿಪಿಎಂನ ಜೆ.ಸಿ.ಥಾಮಸ್ ವಿರುದ್ಧ 3351 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಪಿಣರಾಯಿ ವಿಜಯನ್‌ ಮುನ್ನಡೆ

ಎಲ್‌ಡಿಎಫ್‌ ಮೈತ್ರಿಕೂಟದಿಂದ ಸಿಪಿಎಂ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು 41873 ಮತಗಳನ್ನು ಪಡೆದಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಸಿ. ರಘುನಾಥನ್ ವಿರುದ್ಧ 17,831 ಮತಗಳ ಮುನ್ನಡೆ ಸಾಧಿಸಿದ್ದಾರೆ.

6 ಮತಗಳಿಂದ ಸುವೇಂದು ಮುನ್ನಡೆ

6 ಮತಗಳಿಂದ ಸುವೇಂದು ಮುನ್ನಡೆ

ಪುದುಚೇರಿಯಲ್ಲಿ ರಂಗಸ್ವಾಮಿಗೆ ಹಿನ್ನಡೆ

ಪುದುಚೇರಿಯಲ್ಲಿ ಎಐಎನ್‌ಆರ್‌ಸಿ ನೇತೃತ್ವದ ಮೈತ್ರಿಕೂಟ 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟವು ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

30 ಸದಸ್ಯರ ವಿಧಾನಸಭೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟ ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮಾಜಿ ಮುಖ್ಯಮಂತ್ರಿ ಮತ್ತು ಎಐಎನ್‌ಆರ್‌ಸಿ ಸಂಸ್ಥಾಪಕ ನಾಯಕ ಎನ್‌. ರಂಗಸ್ವಾಮಿ ಯನಾಮ್‌ ಕ್ಷೇತ್ರದಲ್ಲಿ ಹಿನ್ನಡೆ ಸಾಧಿಸಿದ್ದಾರೆ.

ಕಮಲ್ ಹಾಸನ್‌ಗೆ ಮುನ್ನಡೆ, ಬಿಜೆಪಿಯ ಖುಷ್ಬೂ, ಅಣ್ಣಾಮಲೈಗೆ ಹಿನ್ನಡೆ

ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಮಕ್ಕಳ್ ನೀಧಿ ಮಯಂ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಖ್ಯಾತ ನಟ, ಪಕ್ಷದ ಸಂಸ್ಥಾಪಕ ಕಮಲ್‌ ಹಾಸನ್‌ 13538 ಮತಗಳನ್ನು ಪಡೆದಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಮಯೂರ ಎಸ್ ಜಯಕುಮಾರ್ ಅವರಿಗಿಂತ (10836) ಸುಮಾರು ಎರಡೂವರೆ ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಅರ್ವಕುರಿಚಿ ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿಸಿ ಡಿಎಂಕೆಯ ಇಳಂಗೋವನ್‌ಗಿಂತ 200 ಮತಗಳ ಹಿನ್ನಡೆ ಅನುಭವಿಸಿದ್ದಾರೆ.
ಥೌಂಸೆಡ್ಸ್‌ ಲೈಟ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಖ್ಯಾತ ನಟಿ ಖುಷ್ಬೂ ಸುಂದರ್ ಹಿನ್ನಡೆ ಅನುಭವಿಸಿದ್ದಾರೆ

ಪುದುಚೇರಿ: ಯುಪಿಎ - 12, ಎನ್‌ಡಿಎ - 16, ಇತರರು - 1

ತಮಿಳುನಾಡು: ಡಿಎಂಕೆ - 142, ಅಣ್ಣಾಡಿಎಂಕೆ - 91. ಎಎಂಎಂಕೆ - 0, ಎಂಎನ್ಎಂ - 1

ತಮಿಳುನಾಡಿನಲ್ಲಿ ಡಿಎಂಕೆ 136 ಕ್ಷೇತ್ರಗಳಲ್ಲಿ ಮುನ್ನಡೆ

ಚುನಾವಣಾ ಫಲಿತಾಂಶ ವಿಶ್ಲೇಷಣೆ: ಲೈವ್ ಸಂವಾದ 1

ಮಧ್ಯಾಹ್ನ2 ಗಂಟೆವರೆಗೆ ಹೀಗಿದೆ ಪುದುಚೇರಿ ಟ್ರೆಂಡ್

ರಾಜಕೀಯ ತಂತ್ರಜ್ಞ ಮತ್ತು ಟಿಎಂಸಿ ಸಲಹೆಗಾರ ಪ್ರಶಾಂತ್ ಕಿಶೋರ್ ಮಾತು ನಿಜವಾಯ್ತಾ?

ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿಯನ್ನು ಹಿಂದಿಕ್ಕಿ ಮಮತಾ ಬ್ಯಾನರ್ಜಿ ಮುನ್ನಡೆ

ಅಸ್ಸಾಂ ಫಲಿತಾಂಶ

ಅಸ್ಸಾಂನಲ್ಲಿ ಎನ್‌ಡಿಎ ಮೈತ್ರಿಕೂಟ 77 ಕ್ಷೇತ್ರಗಳಲ್ಲಿ ಹಾಗೂ ಕಾಂಗ್ರೆಸ್‌ ಮೈತ್ರಿಕೂಟ 40 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಬಿಜೆಪಿ 62, ಅಸ್ಸಾಂ ಗಣಪರಿಷತ್‌ 10 ಕ್ಷೇತ್ರಗಳಲ್ಲಿ ಮುಂದಿದೆ.

ಪಶ್ಚಿಮ ಬಂಗಾಳ: ಟಿಎಂಸಿ 205 ಸ್ಥಾನಗಳಲ್ಲಿ ಮುಂದಿದೆ. ಬಿಜೆಪಿ 85 ಸ್ಥಾನಗಳಲ್ಲಿ ಮುಂಚೂಣಿಯಲ್ಲಿದೆ.

ಪಶ್ಚಿಮ ಬಂಗಾಳ: ಟಿಎಂಸಿ 205 ಸ್ಥಾನಗಳಲ್ಲಿ ಮುಂದಿದೆ. ಬಿಜೆಪಿ 85 ಸ್ಥಾನಗಳಲ್ಲಿ ಮುಂಚೂಣಿಯಲ್ಲಿದೆ. ಐಎಸ್‌ಎಫ್ ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಮತಗಳ ಅಂತರ ಕಡಿಮೆ; ಸುವೇಂದು ಮುಂದೆ, ಮಮತಾ ಹಿಂದೆ
ಜಿದ್ದಾಜಿದ್ದಿ ಕ್ಷೇತ್ರವೆಂದೇ ಗುರುತಿಸಿಕೊಂಡಿರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ 3,000 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಮೂರನೇ ಸುತ್ತಿನಲ್ಲಿ 8,000 ಮತಗಳ ಅಂತರದಲ್ಲಿ ಮುನ್ನಡೆಯಲಿದ್ದರು. ಈಗ ಅಂತರ ಕಡಿಮೆಯಾಗಿದೆ.

ಈಗ ಐದನೇ ಸುತ್ತಿನ ಮತ ಎಣಿಕೆ ಮುಗಿದಿದೆ.
ಮಮತಾ ಬ್ಯಾನರ್ಜಿ 30,655 ಮತಗಳನ್ನು ಪಡೆದಿದ್ದಾರೆ. ಸುವೇಂದು ಅಧಿಕಾರಿ 34,430 ಮತಗಳನ್ನು ಪಡೆದಿದ್ದಾರೆ. ಮತಗಳ ಅಂತರ 3775.

ಖ್ಯಾತ ನಟಿ ಬಿಜೆಪಿಯ ಖುಷ್ಬೂಗೆ ಹಿನ್ನಡೆ


ತಮಿಳುನಾಡಿನ ಥೌಸೆಂಡ್ ಲೈಟ್ಸ್ ಕ್ಷೇತ್ರದ ಡಿಎಂಕೆ ಅಭ್ಯರ್ಥಿ ಎಜಾಹಿಲನ್‌ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಖುಷ್ಬೂ ಸುಂದರ್ ಅವರಿಗಿಂತ ಮುನ್ನಡೆ ಸಾಧಿಸಿದ್ದಾರೆ.

ಅಸ್ಸಾಂನಲ್ಲಿ ಮತ್ತೆ ಅಧಿಕಾರದತ್ತ ಎನ್‌ಡಿಎ

ಅಸ್ಸಾಂನಲ್ಲಿ ಮತ್ತೆ ಅಧಿಕಾರದತ್ತ ಎನ್‌ಡಿಎ ಸಾಗಿದೆ, ಎನ್‌ಡಿಎ 82 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ. ಯುಪಿಎ 44 ಕ್ಷೇತ್ರಗಳಲಲ್ಲಿ ಮುನ್ನಡೆ ಪಡೆದು ಮತ್ತೆ ಸೋಲಿನತ್ತ ಮುಖ ಮಾಡಿದೆ.

ಕೇರಳ ಚುನಾವಣಾ ಫಲಿತಾಂಶ: ಎಲ್‌ಡಿಎಫ್‌ ಮೈತ್ರಿಕೂಟ 95, ಯುಡಿಎಫ್‌ 45 ಹಾಗೂ ಬಿಜೆಪಿ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಕೇರಳದಲ್ಲಿ ಹೆಚ್ಚಿನ ಜಿಲ್ಲೆಗಳಲ್ಲಿ ಎಲ್‌ಡಿಎಫ್‌ ಮೈತ್ರಿಕೂಟದ ಅಭ್ಯರ್ಥಿಗಳು ಹೆಚ್ಚಿನ ಮತಗಳ ಅಂತರದೊಂದಿಗೆ ಮುನ್ನಡೆ ಸಾಧಿಸಿದ್ದಾರೆ.

ಬಿಜೆಪಿಯ ಬಾಬುಲ್ ಸುಪ್ರಿಯೋಗೆ ಹಿನ್ನಡೆ, ಮುಕುಲ್ ರಾಯ್ ಮುನ್ನಡೆ

ಟೋಲಿಗಂಜ್‌ನಲ್ಲಿ ಟಿಎಂಸಿ ಅಭ್ಯರ್ಥಿ ಅರೂಪ್ ಬಿಸ್ವಾಸ್ ವಿರುದ್ಧ ಬಿಜೆಪಿಯ ಬಾಬುಲ್ ಸುಪ್ರಿಯೋ ಹಿನ್ನಡೆಯಲ್ಲಿದ್ದಾರೆ. ಕೃಷ್ಣನಗರ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ ಮುಕುಲ್ ರಾಯ್ ಅವರು ಟಿಎಂಸಿಯ ಕೌಶಾಂಜಿ ಮುಖರ್ಜಿ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 201 ಮತ್ತು ಬಿಜೆಪಿ 88 ಕ್ಷೇತ್ರಗಳಲ್ಲಿ ಮುನ್ನಡೆ

ಪಶ್ಚಿಮ ಬಂಗಾಳದಲ್ಲಿ ಮತ್ತೆ ಅಧಿಕಾರದತ್ತ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ದಾಪುಗಾಲಿಟ್ಟಿದ್ದು, ಇಲ್ಲಿ ಟಿಎಂಸಿ 201 ಮತ್ತು ಬಿಜೆಪಿ 88 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿವೆ. 

ಪಶ್ಚಿಮ ಬಂಗಾಳದ 187 ಕ್ಷೇತ್ರಗಳಲ್ಲಿ ಟಿಎಂಸಿ, 84 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

ಚೆಪಾಕ್-ತಿರುವಳ್ಳಿಕೆಣಿ ಕ್ಷೇತ್ರದಿಂದ ಡಿಎಂಕೆ ಅವರ ಉದಯನಿಧಿ ಸ್ಟಾಲಿನ್ ಮುನ್ನಡೆ

ತಮಿಳುನಾಡಿನಲ್ಲಿ ಡಿಎಂಕೆ ಸಂಭ್ರಮಾಚರಣೆ

ತಮಿಳುನಾಡು ಡಿಸಿಎಂ ಒ ಪನ್ನೀರ್‌ಸೆಲ್ವಂ

ತಮಿಳುನಾಡಿನಲ್ಲಿ ಡಿಎಂಕೆ 141, ಅಣ್ಣಾಡಿಎಂಕೆ 87 ಕ್ಷೇತ್ರಗಳಲ್ಲಿ ಮುನ್ನಡೆ

ತಮಿಳುನಾಡಿನಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷ ಅಧಿಕಾರದತ್ತ ದಾಪುಗಾಲಿಟ್ಟಿದೆ. ಡಿಎಂಕೆ 141 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದ್ದರೆ, ಅಣ್ಣಾಡಿಎಂಕೆ 87 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಏಪಿಎಸ್ ಅಧಿಕಾರಿ ಅಣ್ಣಾ ಮಲೈ, ನಟಿ ಖುಷ್ಬೂ ಸುಂದರ್ ಅವರಿಗೆ ಹಿನ್ನಡೆಯಾಗಿದೆ.

ಪಶ್ಚಿಮ ಬಂಗಾಳದ 189 ಕ್ಷೇತ್ರಗಳಲ್ಲಿ ಟಿಎಂಸಿ, 89 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ

ಪಶ್ಚಿಮ ಬಂಗಾಳದ 189 ಕ್ಷೇತ್ರಗಳಲ್ಲಿ ಟಿಎಂಸಿ, 89 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ನಮಗೆ ಬಹುಮತ ಸಿಕ್ಕೇ ಸಿಗುತ್ತದೆ ಎಂದು ಸಿಎಂ ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್‌ ಮುನ್ನಡೆ

ಕೇರಳದಲ್ಲಿ ಮೆಟ್ರೋ ಮ್ಯಾನ್ ಶ್ರೀಧರನ್ ಮುನ್ನಡೆ

ಅಸ್ಸಾಂನಲ್ಲಿ 66 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದರೆ ಕಾಂಗ್ರೆಸ್ ಕೇವಲ 28 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.

ಪುದುಚೇರಿಯಲ್ಲಿ ಎನ್‌ಡಿಗೆ 7ರಲ್ಲಿ, ಕಾಂಗ್ರೆಸ್‌ 6ರಲ್ಲಿ ಮುನ್ನಡೆ

ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿಯ ಸುವೇಂದು ಅಧಿಕಾರಿ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ.

ಅಸ್ಸಾಂನಲ್ಲಿ ಬಿಜೆಪಿ 46 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 22ರಲ್ಲಿ ಮುನ್ನಡೆಯಲ್ಲಿದೆ.

ತಮಿಳುನಾಡಿನಲ್ಲಿ ಡಿಎಂಕೆ 84, ಅಣ್ಣಾಡಿಎಂಕೆ 44 ಕ್ಷೇತ್ರಗಳಲ್ಲಿ ಮುನ್ನಡೆ

ಕೇರಳದಲ್ಲಿ ಎಲ್‌ಡಿಎಫ್ 75, ಯುಡಿಎಫ್ 49 ಕ್ಷೇತ್ರಗಳಲ್ಲಿ ಮುನ್ನಡೆ

ಕೇರಳದಲ್ಲಿ ಎಲ್‌ಡಿಎಫ್ 75, ಯುಡಿಎಫ್ 49 ಕ್ಷೇತ್ರಗಳಲ್ಲಿ ಮುನ್ನಡೆ

102ರಲ್ಲಿ ಟಿಎಂಸಿ ಮತ್ತು 92ರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿವೆ.

ಪಶ್ಚಿಮ ಬಂಗಾಳದಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ತೀವ್ರ ಹಣಾಹಣಿ ನಡೆಯುತ್ತಿದ್ದು, 102ರಲ್ಲಿ ಟಿಎಂಸಿ ಮತ್ತು 92ರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿವೆ.

ತಮಿಳುನಾಡಿನಲ್ಲಿ ಡಿಎಂಕೆಗೆ 6, ಅಣ್ಣಾಡಿಎಂಕೆಗೆ 2 ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ

ತಮಿಳುನಾಡಿನಲ್ಲಿ ಡಿಎಂಕೆಗೆ 6, ಅಣ್ಣಾಡಿಎಂಕೆಗೆ 2 ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ

ಕೇರಳದಲ್ಲಿ ಎಲ್‌ಡಿಎಫ್ 48, ಯುಡಿಎಫ್ 47 ಕ್ಷೇತ್ರಗಳಲ್ಲಿ ಮುನ್ನಡೆ

ಕೇರಳದಲ್ಲಿ ಎಲ್‌ಡಿಎಫ್ 48, ಯುಡಿಎಫ್ 47 ಕ್ಷೇತ್ರಗಳಲ್ಲಿ ಮುನ್ನಡೆ

ಅಸ್ಸಾಂನಲ್ಲಿ ಎನ್‌ಡಿಎಗೆ ಮುನ್ನಡೆ, ಯುಪಿಎಗೆ ಹಿನ್ನಡೆ

ಅಸ್ಸಾಂ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ  ಎನ್‌ಡಿಎಗೆ ಮುನ್ನಡೆ, ಯುಪಿಎಗೆ ಹಿನ್ನಡೆ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 78, ಬಿಜೆಪಿ 58 ಕ್ಷೇತ್ರಗಳಲ್ಲಿ ಮುನ್ನಡೆ, ಬಬುಲ್ ಸುಪ್ರಿಯಾ ಮುನ್ನಡೆ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 78, ಬಿಜೆಪಿ 58 ಕ್ಷೇತ್ರಗಳಲ್ಲಿ ಮುನ್ನಡೆ, ಬಬುಲ್ ಸುಪ್ರಿಯಾ ಮುನ್ನಡೆ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 62,ಬಿಜೆಪಿ 58  ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 62,ಬಿಜೆಪಿ 58  ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ

4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದಲ್ಲಿ ಮತ ಎಣಿಕೆ ಆರಂಭ: ಮೊದಲಿಗೆ ಅಂಚೆ ಮತಗಳ ಎಣಿಕೆ

ಕೇರಳದ ಪುತುಪಲ್ಲಿ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ ಕಾಂಗ್ರೆಸ್ ಮುಖಂಡ ಊಮನ್ ಚಾಂಡಿ

ಕೇರಳದ ಮಲಪ್ಪುರಂನನಲ್ಲಿ ಸ್ಟ್ರಾಂಗ್ ರೂಂ ತೆರೆದ ಅಧಿಕಾರಿಗಳು

ಪಶ್ಚಿಮ ಬಂಗಾಳ: ಸಿಲಿಗುರಿಯಲ್ಲಿ ಮತ ಎಣಿಕೆಗೆ ಅಧಿಕಾರಿಗಳ ಸಿದ್ಧತೆ

ಕೇರಳದಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಸಕಲ ಸಿದ್ಧತೆ

ಪುದುಚೇರಿಯಲ್ಲಿ ಮತ ಎಣಿಕೆ ಆರಂಭಕ್ಕೆ ಕ್ಷಣಗಣನೆ

ಅಸ್ಸಾಂನಲ್ಲಿ ಮತ ಎಣಿಕೆ ಆರಂಭಕ್ಕೂ ಮುನ್ನ ಕಂಡುಬಂದ ದೃಶ್ಯ

ಕರ್ನಾಟಕ ಉಪ ಚುನಾವಣೆ: ಇಂದು ಫಲಿತಾಂಶ

ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಹಾಗೂ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ಮೇ 2ರಂದು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಬೆಳಿಗ್ಗೆ 8ರಿಂದ ನಡೆಯಲಿದೆ.

ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ಜಿದ್ದಾಜಿದ್ದಿಯ ಹಣಾಹಣಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಸಾಕ್ಷಿಯಾಗಿತ್ತು. ಬಿಜೆಪಿಯ ಮಂಗಲಾ ಸುರೇಶ ಅಂಗಡಿ ಮತ್ತು ಕಾಂಗ್ರೆಸ್‌ ನಿಂದ ಸತೀಶ ಜಾರಕಿಹೊಳಿ ಸ್ಪರ್ಧಿಸಿದ್ದಾರೆ.

ತಮಿಳುನಾಡು: ಚೆನ್ನೈನ ಮತ ಎಣಿಕೆ ಕೇಂದ್ರದಲ್ಲಿ ಅಂತಿಮ ಹಂತದ ಸಿದ್ಧತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.