ಪಣಜಿ: ‘ಬಾಹ್ಯಾಕಾಶದಲ್ಲಿ ಇದ್ದಾಗ ವೈಯಕ್ತಿಕ ಗುರುತು ಮರೆಯಾಗಿ ಇಡೀ ಭೂಮಿಯೇ ನಮ್ಮ ಗುರುತಾಗುತ್ತದೆ’ ಎಂದು ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಶುಕ್ರವಾರ ಹೇಳಿದರು.
‘ಬಾಹ್ಯಾಕಾಶದಲ್ಲಿ ರಾಷ್ಟ್ರೀಯತೆ ಮುಖ್ಯವಾಗುವುದಿಲ್ಲ. ಬದಲಿಗೆ, ಮಾನವೀಯತೆಯೇ ಪ್ರಾಶಸ್ತ್ಯ ಪಡೆಯುತ್ತದೆ’ ಎಂದು ಹೇಳಿದರು.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ(ಐಎಸ್‌ಎಸ್) ಅನುಭವವನ್ನು ಹಂಚಿಕೊಂಡ ಅವರು, ‘ಅದು ಹೆಚ್ಚು ಆಕರ್ಷಕವಾಗಿತ್ತು. ಜನರು ಈ ಜಗತ್ತಿನಲ್ಲಿ ವಿಭಿನ್ನ ಗುರುತುಗಳನ್ನು ಹೊಂದಿರಬಹುದು. ಆದರೆ ಬಾಹ್ಯಾಕಾಶದಲ್ಲಿದ್ದಾಗ ಅದು ಮರೆಯಾಗುತ್ತವೆ’ ಎಂದು ಹೇಳಿದರು.
ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್‌ಗೆ ಸಂಯೋಜಿತವಾಗಿರುವ ಶಾಲೆಗಳ ವಿದ್ಯಾರ್ಥಿಗಳಿಗಾಗಿ ‘ಇಗ್ನೈಟಿಂಗ್ ಮೈಂಡ್ಸ್, ಎಕ್ಸ್‌ಪ್ಲೋರಿಂಗ್ ಫ್ರಾಂಟಿಯರ್ಸ್: ದಿ ಕನ್ವರ್ಜೆನ್ಸ್ ಆಫ್ ಸ್ಪೇಸ್, ಎಜುಕೇಶನ್ ಆ್ಯಂಡಡ ಇಂಡಸ್ಟ್ರಿ’ ಎಂಬ ಶೀರ್ಷಿಕೆಯ ಅಡಿ ಆಯೋಜಿಸಿದ್ದ ಉಪನ್ಯಾಸನದಲ್ಲಿ ಶುಕ್ಲಾ ಅವರು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.