ADVERTISEMENT

ಆನ್‌ಲೈನ್ ಕ್ಲಾಸ್‌: ಶೇ 27 ವಿದ್ಯಾರ್ಥಿಗಳ ಬಳಿ ಲ್ಯಾಪ್‌ಟಾಪ್‌, ಫೋನ್ ಇಲ್ಲ

ದೇಶದಾದ್ಯಂತ ‌ಎನ್‌ಸಿಇಆರ್‌ಟಿ ನಡೆಸಿದ ಸಮೀಕ್ಷೆ

ಪಿಟಿಐ
Published 20 ಆಗಸ್ಟ್ 2020, 20:26 IST
Last Updated 20 ಆಗಸ್ಟ್ 2020, 20:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ನವದೆಹಲಿ: ಆನ್‌ಲೈನ್‌ ತರಗತಿಯಲ್ಲಿ ಭಾಗಿಯಾಗಲು ಸ್ಮಾರ್ಟ್‌ ಫೋನ್‌ ಅಥವಾ ಲ್ಯಾಪ್‌ಟಾ‍ಪ್‌ ಇಲ್ಲ ಎಂದು ಶೇ 27ರಷ್ಟು ವಿದ್ಯಾರ್ಥಿಗಳು ಹೇಳಿದ್ದಾಗಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್‌ನ (ಎನ್‌ಸಿಇಆರ್‌ಟಿ) ಸಮೀಕ್ಷೆ ಹೇಳಿದೆ.

ಆನ್‌ಲೈನ್‌ ಮೂಲಕ ನಡೆಯುವ ಬೋಧನೆ–ಕಲಿಕೆ ಪ್ರಕ್ರಿಯೆಗೆ ವಿದ್ಯುತ್‌ ಕೊರತೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ ಎಂದು ಹೇಳಿದವರ ಪ್ರಮಾಣ ಶೇ 28ರಷ್ಟಿದೆ.

ಕೋವಿಡ್‌ ಪಿಡುಗು ಹರಡುವುದನ್ನು ತಡೆಯುವುದಕ್ಕಾಗಿ ಮಾರ್ಚ್‌ನಿಂದಲೇ ಶಾಲೆ–ಕಾಲೇಜುಗಳನ್ನು ಮುಚ್ಚಲಾಗಿದೆ. ಆನ್‌ಲೈನ್‌ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ.

ADVERTISEMENT

ಗಣಿತವೇ ಕಷ್ಟ
ಆನ್‌ಲೈನ್‌ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಅರ್ಥ ಮಾಡಿಕೊಳ್ಳಲು ಅತ್ಯಂತ ಕಷ್ಟವಾಗುವ ವಿಷಯ ಗಣಿತ. ಕೇಂದ್ರೀಯ ವಿದ್ಯಾಲಯದ ಶೇ 39.5ರಷ್ಟು, ಸಿಬಿಎಸ್‌ಇ ಶಾಲೆಗಳ ಶೇ 45.20ರಷ್ಟು, ನವೋದಯ ವಿದ್ಯಾಲಯದ ಶೇ 33.6ರಷ್ಟು ವಿದ್ಯಾರ್ಥಿಗಳು ಗಣಿತ ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ಈ ಪಟ್ಟಿಯಲ್ಲಿ ವಿಜ್ಞಾನ ಎರಡನೇ ಸ್ಥಾನದಲ್ಲಿದೆ. ಕೇಂದ್ರೀಯ ವಿದ್ಯಾಲಯ (ಶೇ 25), ಸಿಬಿಎಸ್‌ಇ (ಶೇ 20) ಮತ್ತು ನವೋದಯ ವಿದ್ಯಾಲಯದ (ಶೇ 33.6) ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಆನ್‌ಲೈನ್‌ನಲ್ಲಿ ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತಿದೆ.

ಸ್ಮಾರ್ಟ್‌ಫೋನ್‌ ಹೆಚ್ಚು ಬಳಕೆ
ಆನ್‌ಲೈನ್‌ ಬೋಧನೆ ಮತ್ತು ಕಲಿಕೆಗೆ ಸ್ಮಾರ್ಟ್‌ ಫೋನ್‌ಗಳೇ ಅತಿ ಹೆಚ್ಚು ಬಳಕೆ ಆಗುತ್ತಿವೆ. ಕೇಂದ್ರೀಯ ವಿದ್ಯಾಲಯದ ಶೇ 84ರಷ್ಟು ವಿದ್ಯಾರ್ಥಿಗಳು ಮತ್ತು ಶೇ 88ರಷ್ಟು ಶಿಕ್ಷಕರು ಸ್ಮಾರ್ಟ್ ‌ಫೋನ್‌ ಬಳಸುತ್ತಿದ್ದಾರೆ. ನವೋದಯ ವಿದ್ಯಾಲಯದ ಶೇ 87.7ರಷ್ಟು ವಿದ್ಯಾರ್ಥಿಗಳು, ಶೇ 73.4ರಷ್ಟು ಶಿಕ್ಷಕರು, ಸಿಬಿಎಸ್‌ಇ ಶಾಲೆಗಳ ಶೇ 82ರಷ್ಟು ವಿದ್ಯಾರ್ಥಿಗಳು, ಶೇ 81ರಷ್ಟು ಶಿಕ್ಷಕರು ಸ್ಮಾರ್ಟ್‌ ಫೋನ್‌ ಬಳಸಿಯೇ ಕಲಿಕೆ ಮತ್ತು ಬೋಧನೆ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.