ನವದೆಹಲಿ: ನಾವೀನ್ಯ ಹಾಗೂ ಆವಿಷ್ಕಾರದಲ್ಲಿ ಉತ್ತಮ ಸಾಧನೆ ತೋರಿದ ಸಂಸ್ಥೆಗಳಿಗೆ ನೀಡುವ ಅಟಲ್ ರ್‍ಯಾಂಕಿಂಗ್‌ನಲ್ಲಿ (ಎಆರ್‌ಐಐಎ) ಕೇಂದ್ರದ ಅನುದಾನ ಪಡೆಯುವ ವಿಭಾಗದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ನಾಲ್ಕನೇ ರ್‍ಯಾಂಕ್ ಪಡೆದಿದೆ.
ರಾಜ್ಯದ ಅನುದಾನ ಪಡೆಯುವ ಸ್ವಾಯತ್ತ ಸಂಸ್ಥೆಗಳ ಪೈಕಿ ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಎರಡನೇ ಸ್ಥಾನ ಪಡೆದಿದೆ.
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಈ ರ್‍ಯಾಂಕಿಂಗ್‌ಗಳನ್ನು ಮಂಗಳವಾರ ಘೋಷಿಸಿದರು.
ಎಆರ್‌ಐಐಎ,ಮಾನವ ಅಭಿವೃದ್ಧಿ ಸಚಿವಾಲಯದ ಉಪಕ್ರಮವಾಗಿದ್ದು, ನಾವೀನ್ಯ ಆವಿಷ್ಕಾರಗಳನ್ನು ಪರಿಗಣಿಸಿ ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ರ್‍ಯಾಂಕ್ ನೀಡುತ್ತಿದೆ. ಕೇಂದ್ರದ ಅನುದಾನ ಪಡೆಯುವ ಸಂಸ್ಥೆಗಳು, ರಾಜ್ಯದ ಅನುದಾನ ಪಡೆಯುವ ವಿಶ್ವವಿದ್ಯಾಲಯಗಳು, ರಾಜ್ಯದ ಅನುದಾನ ಪಡೆಯುವ ಸ್ವಾಯತ್ತ ಸಂಸ್ಥೆಗಳು, ಡೀಮ್ಡ್ ವಿಶ್ವವಿದ್ಯಾಲಯಗಳು. ಖಾಸಗಿ ಸಂಸ್ಥೆಗಳು ಮತ್ತು ಮಹಿಳಾ ಉನ್ನತ ಶಿಕ್ಷಣ ಸಂಸ್ಥೆಗಳು ಹೀಗೆ ಒಟ್ಟು ಆರು ವಿಭಾಗದಲ್ಲಿ ರ್‍ಯಾಂಕಿಂಗ್ ಘೋಷಿಸಲಾಗುತ್ತಿದೆ.
ಕೇಂದ್ರದ ಅನುದಾನ ಪಡೆಯುವ ಸಂಸ್ಥೆಗಳ ವಿಭಾಗದಲ್ಲಿ ಮದ್ರಾಸ್, ಬಾಂಬೆ ಹಾಗೂ ದೆಹಲಿಯ ಐಐಟಿಗಳು ಕ್ರಮವಾಗಿ ಮೊದಲ ಮೂರು ರ್‍ಯಾಂಕ್ ಪಡೆದಿವೆ. ಐಐಟಿ ಖರಗ್‌ಪುರ 5ನೇ ಸ್ಥಾನ ಪಡೆದಿದೆ. ಮೊದಲ 10 ರ್‍ಯಾಂಕ್‌ಗಳ ಪೈಕಿ ಏಳು ಐಐಟಿಗಳು ಸ್ಥಾನ ಪಡೆದಿವೆ. ಮಹಿಳಾ ಉನ್ನತ ಶಿಕ್ಷಣ ಸಂಸ್ಥೆಗಳ ವಿಭಾಗದಲ್ಲಿ ‘ಅವಿನಾಶಿಲಿಂಗಂ ಇನ್‌ಸ್ಟಿಟ್ಯೂಟ್ ಫಾರ್ ಹೋಂ ಸೈನ್ಸ್ ಮತ್ತು ಹೈಯರ್ ಎಜುಕೇಷನ್’ ಮೊದಲ ರ್‍ಯಾಂಕ್ ಪಡೆದಿದೆ.
ಎನ್‌ಆರ್‌ಎಫ್ ಸ್ಥಾಪನೆ: ‘ಮಾಜಿ ಪ್ರಧಾನಿ ಅಟಲ್ ಬಿಹಾರಿವಾಜಪೇಯಿ ಅವರ ನಾಯಕತ್ವದಲ್ಲಿ ಭಾರತವು ಆವಿಷ್ಕಾರ ಕ್ಷೇತ್ರದಲ್ಲಿ ಹಲವು ಗಮನಾರ್ಹ ಸಾಧನೆಗಳನ್ನು ಮಾಡಿತ್ತು. ಸಂಶೋಧನೆ ಹಾಗೂ ಆವಿಷ್ಕಾರಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ಸಲುವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯಡಿ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ(ಎನ್‌ಆರ್‌ಎಫ್) ಸ್ಥಾಪಿಸಲಾಗುವುದು’ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಇದೇ ವೇಳೆ ತಿಳಿಸಿದರು.
ರ್‍ಯಾಂಕ್ ಪಟ್ಟಿ
ರಾಜ್ಯದ ಧನಸಹಾಯ ಪಡೆಯುವ ವಿಶ್ವವಿದ್ಯಾಲಯಗಳ(ವಿ.ವಿ) ವಿಭಾಗ
ಮೊದಲ ರ್‍ಯಾಂಕ್: ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ, ಮಹಾರಾಷ್ಟ್ರ
ಎರಡನೇ ರ್‍ಯಾಂಕ್:ಪಂಜಾಬ್ ವಿ.ವಿ
ಮೂರನೇ ರ್‍ಯಾಂಕ್: ಚೌಧರಿ ಚರಣ್ ಸಿಂಗ್ ಹರಿಯಾಣ ಕೃಷಿ ವಿ.ವಿ
ರಾಜ್ಯದ ಧನಸಹಾಯ ಪಡೆಯುವ ಸ್ವಾಯತ್ತ ಸಂಸ್ಥೆಗಳ ವಿಭಾಗ
ಮೊದಲ ರ್‍ಯಾಂಕ್:ಕಾಲೇಜ್ ಆಫ್ ಇಂಜಿನಿಯರಿಂಗ್, ಪುಣೆ
ಎರಡನೇರ್‍ಯಾಂಕ್: ಪಿಇಎಸ್, ಬೆಂಗಳೂರು
ಮೂರನೇರ್‍ಯಾಂಕ್:ಕೊಯಮತ್ತೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ,ತಮಿಳುನಾಡಿನ
ಖಾಸಗಿ ವಿ.ವಿಗಳ ವಿಭಾಗ
ಮೊದಲ ರ್‍ಯಾಂಕ್:ಕಳಿಂಗಾ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ, ಒಡಿಶಾ
ಎರಡನೇರ್‍ಯಾಂಕ್:ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಸೈಯನ್ಸ್ ಆ್ಯಂಡ್ ಟೆಕ್ನಾಲಜಿ, ತಮಿಳುನಾಡು
ಮೂರನೇ ರ್‍ಯಾಂಕ್:ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತಮಿಳುನಾಡು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.