ADVERTISEMENT

ಸನಾತನ ಧರ್ಮದ ಟೀಕೆ ಹತಾಶಗೊಂಡ ಗುಂಪಿನವರ ಅಭ್ಯಾಸ: ಮುಖ್ತಾರ್ ಅಬ್ಬಾಸ್‌ ನಖ್ವಿ

ಬಿಜೆಪಿಯ ಹಿರಿಯ ಮುಖಂಡ ಮುಖ್ತಾರ್ ಅಬ್ಬಾಸ್‌ ನಖ್ವಿ ತಿರುಗೇಟು

ಪಿಟಿಐ
Published 9 ಸೆಪ್ಟೆಂಬರ್ 2023, 13:51 IST
Last Updated 9 ಸೆಪ್ಟೆಂಬರ್ 2023, 13:51 IST
ಮುಖ್ತಾರ್ ಅಬ್ಬಾಸ್ ನಖ್ವಿ
ಮುಖ್ತಾರ್ ಅಬ್ಬಾಸ್ ನಖ್ವಿ   

ರಾಂಪುರ (ಉತ್ತರ ಪ್ರದೇಶ): ‘ಸನಾತನ ಧರ್ಮ ಟೀಕಿಸುವುದು ಹತಾಶಗೊಂಡ ಗುಂಪಿನವರ ಅಭ್ಯಾಸವಾಗಿಬಿಟ್ಟಿದೆ. ಈ ಬೌದ್ಧಿಕ ದಿವಾಳಿತನ ಅವರಿಗೆ ತಿರುಗು ಬಾಣವಾಗಲಿದೆ’ ಎಂದು ಬಿಜೆಪಿಯ ಹಿರಿಯ ಮುಖಂಡ ಮುಖ್ತಾರ್‌ ಅಬ್ಬಾಸ್‌ ನಖ್ವಿ ಅವರು ಡಿಎಂಕೆ ಮುಖಂಡರ ವಿರುದ್ಧ ಇಲ್ಲಿ ಹರಿಹಾಯ್ದರು.

ಬಿಜೆಪಿ ರಾಷ್ಟ್ರವ್ಯಾಪಿ ಹಮ್ಮಿಕೊಂಡಿರುವ ‘ನನ್ನ ಮಣ್ಣು, ನನ್ನ ದೇಶ’ ಅಭಿಯಾನದಲ್ಲಿ ಮಾತನಾಡಿದ ಅವರು ‘ಸನಾತನ ಧರ್ಮ ಭಾರತದ ಆತ್ಮ. ಇದರ ವಿರುದ್ಧ ದಾಳಿ ನಡೆಸುವವರು ನಾಶವಾಗುತ್ತಾರೆ’ ಎಂದರು.

‘ಭೂಮಿ ಮೇಲಿನ ಪುರಾತನ ನಂಬಿಕೆಯಾಗಿರುವ ಸನಾತನ ಧರ್ಮದ ಮೇಲೆ ನಡೆಸುವ ದಾಳಿ, ಅವರ ಮಾನಸಿಕ ಅಸ್ವಸ್ಥತೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ಉಲ್ಲೇಖಿಸಿದ್ದಾರೆ.

ADVERTISEMENT

‘ನೂರಾರು ವಿದೇಶಿಯರ ಆಕ್ರಮಣಕ್ಕೆ ಭಾರತ ಸಾಕ್ಷಿಯಾಗಿದೆ. ಲೂಟಿಕೋರರು ಇಲ್ಲಿನ ಸಂಪತ್ತು ದೋಚುವಲ್ಲಿ ಯಶಸ್ವಿಯಾದರೆ ಹೊರತು, ಅವರ ದುಷ್ಟತನಕ್ಕೆ ಸನಾತನ ಧರ್ಮದ ಮೌಲ್ಯ, ಭಾರತೀಯ ಸಂಸ್ಕೃತಿಯನ್ನು ನಾಶಪಡಿಸಲು ಸಾಧ್ಯವಾಗಲಿಲ್ಲ’ ಎಂದು ಹೇಳಿದರು.

ಸನಾತನ ಸಂಸ್ಕೃತಿಯ ಮೇಲೆ ನಡೆಯುತ್ತಿರುವ ‘ಕೋಮುವಾದ ಮತ್ತು ಕ್ರಿಮಿನಲ್ ದಾಳಿ ಆಕಸ್ಮಿಕವಾದುದಲ್ಲ, ಆಯ್ಕೆ ಮಾಡಿಕೊಂಡಿರುವುದು’ ಎಂದರು.

‘ಇಡೀ ವಿಶ್ವವೇ ಭಾರತದ ಬಗ್ಗೆ ಹೆಮ್ಮೆಯಿಂದ ಶ್ಲಾಘಿಸುತ್ತಿದ್ದರೆ, ಕಾಂಗ್ರೆಸ್‌ ಮುಖಂಡ ವಿದೇಶಿ ನೆಲದಲ್ಲಿ ದೇಶದ ವಿರುದ್ಧ ‘ತಪ್ಪು ಮಾಹಿತಿಯ ವ್ಯಾಪಾರಿ’ ಹಾಗೂ ‘ಪಿತೂರಿಗಳ ಗುತ್ತಿಗೆದಾರನಂತೆ’ ನಡೆದುಕೊಳ್ಳುತ್ತಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.