ADVERTISEMENT

ಕಾಣೆಯಾಗಿದ್ದ ಕಾಶ್ಮೀರಿ ವಿದ್ಯಾರ್ಥಿ ಆಡಿಯೊ ಕ್ಲಿಪ್‌ನಲ್ಲಿ ಐಎಸ್‌ಗೆ ನಿಷ್ಠೆ

ಏಜೆನ್ಸೀಸ್
Published 3 ನವೆಂಬರ್ 2018, 9:45 IST
Last Updated 3 ನವೆಂಬರ್ 2018, 9:45 IST
   

ಕಾಣೆಯಾಗಿದ್ದ ನೋಯ್ಡಾದ ಶಾರದಾ ವಿಶ್ವಾವಿದ್ಯಾಲಯದಲ್ಲಿ ಅಧ್ಯಯನ ನಡೆಸುತ್ತಿದ್ದ ಕಾಶ್ಮೀರಿ ವಿದ್ಯಾರ್ಥಿಯು ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಛಾಯಾಚಿತ್ರದೊಂದಿಗೆ ಕಾಣಿಸಿಕೊಂಡಿದ್ದಾನೆ. ಬಂದೂಕನ್ನು ಹೊಂದಿರುವ ಚಿತ್ರ ಮತ್ತು ಅಬು ಬಕ್ರ್‌ ಅಲಿ–ಬಾಗ್ದಾದಿ ನೇತೃತ್ವದ ‘ಇಸ್ಲಾಮಿಕ್‌ ಸ್ಟೇಟ್‌’(ಐಎಸ್‌) ಗುಂಪಿಗೆ ತನ್ನ ನಿಷ್ಠೆಯನ್ನು ಪ್ರತಿಪಾದಿಸುವ ಧ್ವನಿ ಸಂದೇಶವೂ ಜತೆಗಿದೆ.

ಉತ್ತರ ಪ್ರದೇಶದ ಶಾರದಾ ವಿ.ವಿಯಲ್ಲಿ ತಾಂತ್ರಿಕ ಪದವಿ ಶಿಕ್ಷಣ ಪಡೆಯುತ್ತಿರುವ 20 ವರ್ಷ ವಯಸ್ಸಿನ ಇಥಿಷಮ್‌ ಬಿಲಾಲ್‌ ಮೇಲೆ‘ಅಫ್ಗಾನ್‌ ನಿವಾಸಿಯಂತೆ ಕಾಣುತ್ತಾನೆ’ ಎಂದು ಆರೋಪಿಸಿ ಕೆಲ ವಿದ್ಯಾರ್ಥಿಗಳು ಅ.4ರಂದು ವಿ.ವಿ ಆವರಣದಲ್ಲಿ ಹಲ್ಲೆ ಮಾಡಿದ್ದರು.

ನಮ್ಮ ಮಗ ಕುಟುಂಬದೊಟ್ಟಿಗೆ ಸಂಪರ್ಕದಲ್ಲಿದ್ದ. ಆದರೆ, ಅ.28ರ ಸಂಜೆ ಸಂಪರ್ಕಿಸಿದ್ದೇ ಕೊನೆ ಎಂದು ಅವನ ತಂದೆ ಬಿಲಾಲ್ ಅಹ್ಮದ್ ಸೋಫಿ ಮತ್ತು ತಾಯಿ ಇರ್ಫಾನಾ ಅವರು ಗುರುವಾರ ಹೇಳಿದ್ದರು.

ADVERTISEMENT

ಕಾಣೆಯಾಗಿರುವ ತಮ್ಮ ಮಗನನ್ನು ಹುಡುಕಲು ರಾಜ್ಯಪಾಲರು ಮಧ್ಯಪ್ರವೇಶಿಸಬೇಕು ಎಂದು ಈ ಕುಟುಂಬ ಬಯಸಿತ್ತು.

ತಲೆಗೆ ಮತ್ತು ಮೈಗೆ ಕಪ್ಪು ಬಟ್ಟೆ ಧರಿಸಿರುವ, ಎದೆಯ ಮೇಲೆ ಮದ್ದು–ಗುಂಡುಗಳನ್ನಿರಿಸುವ ಚೀಲವನ್ನು ಹಾಕಿಕೊಂಡಿರುವ, ಅವನ ಹಿನ್ನೆಲೆಯಾಗಿ ‘ಇಸ್ಲಾಮಿಕ್‌ ಸ್ಟೇಟ್‌’ನ ಧ್ವಜ ಚಿತ್ರದಲ್ಲಿದೆ. ಈ ಚಿತ್ರ ಶುಕ್ರವಾರ ಸಂಜೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಇದಾದ ಐದು ನಿಮಿಷಗಳ ಬಳಿಕ ಇಥಿಷಮ್‌ ಬಿಲಾಲ್ ಮಾತನಾಡಿರುವ ಆರು ನಿಮಿಷದ ಧ್ವನಿ ಸಂದೇಶ ಕೂಡ ವೈರಲ್‌ ಆಗಲು ಆರಂಭವಾಯಿತು.

ಧ್ವನಿ ಸಂದೇಶದಲ್ಲಿ ಹೇಳಿರುವಂತೆ, ‘ನಾನು (ಇಥಿಷಮ್‌ ಬಿಲಾಲ್‌) ಅಬು ಬಕ್ರ್‌ ಅಲ್‌–ಬಾಗ್ದಾದಿ ನೇತೃತ್ವದ ಜುಂದಲ್‌ ಖಲಾಫಾದಲ್ಲಿ ಸೇರ್ಪಡೆಗೊಂಡ ನಂತರ ಆಶೀರ್ವದಿಸಿದರು. ಕಾಶ್ಮೀರದಲ್ಲಿ ಇಸ್ಲಾಮಿಕ್‌ ಆಳ್ವಿಕೆಯ ನೆಲೆಗೊಳ್ಳುವ ತನಕ ನಾನು ವಿಶ್ರಮಿಸುವುದಿಲ್ಲ ಎಂದು ಪ್ರತಿಜ್ಞೆಯನ್ನು ತೆಗೆದುಕೊಂಡಿದ್ದೇನೆ’ ಎಂದಿದೆ.

‘ಆ ವ್ಯಕ್ತಿ(ಇಥಿಷಮ್‌) ಉಗ್ರಗಾಮಿ ಸಂಘಟನೆ ಸೇರಬಹುದು ಎಂದು ನಿರೀಕ್ಷಿಸಿದ್ದೆವು. ನಾವು ಆ ಧ್ವನಿ ಸಂದೇಶ ಮತ್ತು ಅದರ ವಿಶ್ವಾಸಾರ್ಹತೆಯನ್ನು ಪರಿಶೀಲಿಸುತ್ತೇವೆ ಎಂದು ಡಿಜಿಪಿ ದಿಲ್ಬಾಗ್‌ ಸಿಂಗ್‌ ಹೇಳಿದ್ದಾರೆ.

ಪ್ರಾಥಮಿಕ ತನಿಖೆಗಳ ಪ್ರಕಾರ ಇಥಿಷಮ್‌ ‘ಉಗ್ರ ಸಂಘಟನೆ ಸೇರಲು ಮನಸ್ಸು ಮಾಡಿದ್ದಾನೆ’ ಎಂದು ಗೊತ್ತಾಗಿರುವುದಾಗಿ ಹೆಚ್ಚುವರಿ ತನಿಖಾಧಿಕಾರಿ(ಕಾನೂನು ಮತ್ತು ಸುವ್ಯವಸ್ಥೆ)ಮುನಿರ್‌ ಖಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.