ADVERTISEMENT

Covid-19 India Update: ಒಂದೇ ದಿನ 57ಸಾವಿರ ಪ್ರಕರಣ, 5.25ಲಕ್ಷ ಮಾದರಿ ಪರೀಕ್ಷೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಆಗಸ್ಟ್ 2020, 5:10 IST
Last Updated 1 ಆಗಸ್ಟ್ 2020, 5:10 IST
   

ನವದೆಹಲಿ:ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 57 ಸಾವಿರ ಕೋವಿಡ್–19 ಪ್ರಕರಣಗಳು ದೃಢಪಟ್ಟಿದ್ದು, ಇದೇ ವೇಳೆ 5,25,689 ಜನರಿಗೆ ಕೋವಿಡ್–19 ಸೋಂಕು ಪರೀಕ್ಷೆ ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಲಾಖೆಯ ಮಾಹಿತಿ ಪ್ರಕಾರ ಜುಲೈ 26 ರಂದು5,15,000, ಜುಲೈ 27 ರಂದು 5,28,000, ಜುಲೈ 28 ರಂದು 4,08,855, ಜುಲೈ 29 ರಂದು 4,46,642 ಹಾಗೂಜುಲೈ30 ರಂದು6,42,588 ಜನರ ಮಾದರಿ ಪರೀಕ್ಷೆ ನಡೆಸಲಾಗಿತ್ತು. ಇದರೊಂದಿಗೆಇಲ್ಲಿಯವರೆಗೆ ಒಟ್ಟು 1,93,58,659 ಜನರಿಗೆ ಕೋವಿಡ್–19 ಸೋಂಕು ಪರೀಕ್ಷೆ ನಡೆಸಿದಂತಾಗಿದೆ.

ಒಂದೇದಿನ ಅತಿಹೆಚ್ಚು ಪ್ರಕರಣ
ಶುಕ್ರವಾರ ಬರೋಬ್ಬರಿ 57,117 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಇದು ಈವರೆಗೆ ಒಂದೇದಿನ ವರದಿಯಾದ ಅತಿಹೆಚ್ಚು ಪ್ರಕರಣಗಳಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 16,95,988ಕ್ಕೆ ಏರಿಕೆಯಾಗಿದೆ. ಮತ್ತೆ 764 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 36,511 ಆಗಿದೆ. ಇದುವರೆಗೆ ಒಟ್ಟು 10,94,374 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 5,65,103 ಪ್ರಕರಣಗಳು ಸಕ್ರಿಯವಾಗಿವೆ.

ADVERTISEMENT

ಮಹಾರಾಷ್ಟ್ರದಲ್ಲಿ 4 ಲಕ್ಷ ಜನರಿಗೆ ಸೋಂಕು
ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಇದುವರೆಗೆ4,22,118ಪ್ರಕರಣಗಳು ವರದಿಯಾಗಿದ್ದು, 2,56,158 ಮಂದಿ ಗುಣಮುಖರಾಗಿದ್ದಾರೆ. 14,994ಸೋಂಕಿತರುಮೃತಪಟ್ಟಿದ್ದು, ಇನ್ನೂ 1,50,966 ಪ್ರಕರಣಗಳು ಸಕ್ರಿಯವಾಗಿವೆ.

ತಮಿಳುನಾಡಿನಲ್ಲಿ 2,45,859 ಜನರಿಗೆಸೋಂಕು ತಗುಲಿದೆ. ಇದುವರೆಗೆ 1,83,956 ಸೋಂಕಿತರು ಗುಣುಮುಖರಾಗಿದ್ದಾರೆ. 3,935 ಮಂದಿ ಸಾವಿಗೀಡಾಗಿದ್ದು, ಇನ್ನೂ 57,968 ಪ್ರಕರಣಗಳು ಸಕ್ರಿಯವಾಗಿವೆ.

ಆಂಧ್ರ ಪ್ರದೇಶದಲ್ಲಿ 1,40,933 ಪ್ರಕರಣಗಳು ವರದಿಯಾಗಿವೆ. 63,864ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 75,720 ಪ್ರಕರಣಗಳು ಸಕ್ರಿಯವಾಗಿದ್ದು, 1,349 ಮಂದಿ ಸಾವಿಗೀಡಾಗಿದ್ದಾರೆ.ರಾಜಧಾನಿ ದೆಹಲಿಯಲ್ಲಿ 1,35,598 ಮಂದಿಗೆಸೋಂಕು ತಗುಲಿದೆ. ಇದರಲ್ಲಿ 1,20,930 ಸೋಂಕಿತರು ಗುಣಮುಖರಾಗಿದ್ದಾರೆ. ಇನ್ನೂ 10,705 ಪ್ರಕರಣಗಳು ಸಕ್ರಿಯವಾಗಿದ್ದು, 3,963 ಸೋಂಕಿತರು ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿಕೋವಿಡ್
ಕರ್ನಾಟಕದಲ್ಲಿ ಜುಲೈ 31ರ ಸಂಜೆ 5ರ ವರೆಗೆ ಒಟ್ಟು1,24,115 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ, 49,788 ಸೋಂಕಿತರು ಗುಣಮುಖರಾಗಿದ್ದು, ಇನ್ನೂ 72,005 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 2,314 ಆಗಿದೆ. 609 ಸೋಂಕಿತರಿಗೆಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.