ADVERTISEMENT

‘ರಾಷ್ಟ್ರವಾದ’ ಪದ ಬಳಕೆ ಬೇಡ, ಅದು ನಾಜಿವಾದದ ಸೂಚಕ: ಮೋಹನ್‌ ಭಾಗವತ್‌ 

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 13:54 IST
Last Updated 20 ಫೆಬ್ರುವರಿ 2020, 13:54 IST
   

ರಾಂಚಿ:'ರಾಷ್ಟ್ರವಾದಎಂಬುದು ಹಿಟ್ಲರ್‌ನ ನಾಜಿ ಮೂಲದ್ದು ಎಂಬಂತೆ ನೋಡಲಾಗುತ್ತಿದೆ.ಹೀಗಾಗಿಜನ ರಾಷ್ಟ್ರವಾದಎಂಬ ಪದದ ಬಳಕೆಯನ್ನು ನಿಲ್ಲಿಸಬೇಕು’ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಹೇಳಿದ್ದಾರೆ.

ಮೊರಾಬಾದಿಯ ಮುಖರ್ಜಿ ವಿಶ್ವವಿದ್ಯಾಲಯದಲ್ಲಿಆಯೋಜಿಸಿದ್ದ ಸಂಘದ ಕಾರ್ಯಕ್ರಮವೊಂದಲ್ಲಿ ಮಾತನಾಡಿರುವ ಅವರು, ಈ ಮಾತನ್ನು ಹೇಳಿದರು.

ಇತ್ತೀಚೆಗೆ ಬ್ರಿಟನ್‌ಗೆ ಭೇಟಿ ನೀಡಿದ್ದ ಅವರು, ಅಲ್ಲಿನ ಆರ್‌ಎಸ್‌ಎಸ್‌ಕಾರ್ಯಕರ್ತರೊಂದಿಗೆ ನಡೆದ ಮಾತುಕತೆಯನ್ನುಪ್ರಸ್ತಾಪಿಸಿದ್ದರು.

ADVERTISEMENT

‘ಇಂಗ್ಲಿಷ್‌ನ ನ್ಯಾಷನಲಿಸಂ ಇಂಗ್ಲೆಂಡ್‌ನಲ್ಲಿ ಬೇರೆಯದ್ದೇ ಅರ್ಥಕೊಡುತ್ತದೆ. ಹಾಗಾಗಿ ಅದನ್ನು ಬಳಕೆ ಮಾಡದೇ ಇರುವುದು ಒಳಿತು.ಯಾರೂ ಕೂಡ ರಾಷ್ಟ್ರವಾದದ ಪದ ಬಳಕೆ ಮಾಡಬಾರದು. ರಾಷ್ಟ್ರ ಮತ್ತು ರಾಷ್ಟ್ರೀಯತೆ ಎಂಬುದೇನೋ ಸರಿ. ಆದರೆ, ರಾಷ್ಟ್ರವಾದ ಎಂಬ ಪದವು ಹಿಟ್ಲರ್‌ನ ನಾಜಿವಾದವನ್ನು ಪ್ರತಿಪಾದಿಸುತ್ತದೆ’ಎಂದು ಕಾರ್ಯಕರ್ತ ಹೇಳಿದ್ದಾಗಿ ಮೋಹನ್‌ ಭಾಗವತ್‌ ತಿಳಿಸಿದರು.

‘ಮೂಲಭೂತವಾದದ ಕಾರಣದಿಂದಾಗಿ ದೇಶದೆಲ್ಲೆಡೆಗೊಂದಲಮಯ ವಾತಾವರಣ ಮನೆ ಮಾಡಿದೆ. ಭಾರತದ ನೀತಿಗಳುಒಂದೋ ಜನರು ದಾಸರಾಗುವಂತೆ ಮಾಡುತ್ತದೆ ಅಥವಾ ಮತ್ತೊಬ್ಬರನ್ನು ದಾಸರನ್ನಾಗಿ ಮಾಡಿಕೊಳ್ಳುವಂತೆ ಮಾಡುತ್ತದೆ. ಪ್ರತಿಯೊಬ್ಬರೂ ಸಾಮರಸ್ಯದಿಂದ ಬದುಕುವ ಗುಣ ಭಾರತದಲ್ಲಿದೆ. ಭಾರತದದ್ದು ಹಿಂದು ಸಂಸ್ಕೃತಿ. ವೈವಿದ್ಯತೆಯನ್ನೂ ಮೀರಿ ಇಲ್ಲಿಪ್ರತಿಯೊಬ್ಬರೂಒಬ್ಬರಿಗೊಬ್ಬರು ಪರೋಕ್ಷವಾಗಿ ಬೆಸೆದುಕೊಂಡಿರುತ್ತಾರೆ,’ ಮೋಹನ್‌ ಭಾಗವತ್‌ ಹೇಳಿದ್ದಾರೆ.

‘ಭಾರತವನ್ನು ವಿಶ್ವನಾಯಕನನ್ನಾಗಿ ಮಾಡುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರಿಯಾಗಿದೆ. ಒಂದು ರಾಷ್ಟ್ರವಾಗಿ ಭಾರತ ಬೆಳೆದರೆ ಅದು ಇಡೀ ಜಗತ್ತಿಗೇ ಅನುಕೂಲಕಾರಿ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.