ADVERTISEMENT

ರಾಮ ಮಂದಿರ ನಿರ್ಮಾಣ ಧರ್ಮಸಭೆ ಕೊನೇ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2018, 19:45 IST
Last Updated 22 ನವೆಂಬರ್ 2018, 19:45 IST
   

ಲಖನೌ: ಸಂತರನ್ನು ನಿರ್ಲಕ್ಷಿಸಿದರೆ ಮತ್ತು ರಾಮ ಮಂದಿರ ನಿರ್ಮಾಣ ಮಾಡದೇ ಇದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಎಚ್ಚರಿಕೆ ಕೊಟ್ಟಿದೆ.

ಅಯೋಧ್ಯೆಯಲ್ಲಿ ಭಾನುವಾರ ನಡೆಯಲಿರುವ ಧರ್ಮಸಭೆಗೆ ಕೆಲವೇ ದಿನ ಮೊದಲು ಈ ಎಚ್ಚರಿಕೆ ನೀಡಲಾಗಿದೆ. ಸಭೆಗೆ ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಕಾಂಗ್ರೆಸ್‌ ‍ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನೂ ತರಾಟೆಗೆ ತೆಗೆದುಕೊಂಡಿದೆ. ಧರ್ಮಸಭೆಯು ಸಂಬಂಧಪಟ್ಟ ಎಲ್ಲರಿಗೂ ಕೊನೆಯ ಸಂದೇಶ ಎಂದೂ ಹೇಳಿದೆ.

ಸೀತೆಯನ್ನು ಬಿಡುಗಡೆ ಮಾಡುವಂತೆ ರಾವಣನ ಮನವೊಲಿಸಲು ಶ್ರೀರಾಮನು ಅಂಗದನನ್ನುಲಂಕೆಗೆ ಕಳುಹಿಸಿದ್ದ. ಇದು ರಾವಣನ ಜತೆಗೆ ಯುದ್ಧ ತಪ್ಪಿಸಲು ರಾಮನಿಗೆ ಇದ್ದ ಕೊನೆಯ ಅವಕಾಶವಾಗಿತ್ತು. ಅದೇ ರೀತಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಇರುವ ಕೊನೆಯ ಅವಕಾಶ ಇದು ಎಂದು ಬೆದರಿಕೆಯ ದಾಟಿಯಲ್ಲಿಯೇ ವಿಎಚ್‌ಪಿಯ ಹಿರಿಯ ಮುಖಂಡ ಭೋಲೇಂದ್ರ ಸೈದನ್‌ ಮಾತನಾಡಿದ್ದಾರೆ.

ADVERTISEMENT

ಜನಿವಾರ ಧಾರಿಯಾಗಿ ಮಾನಸ ಸರೋವರ ತೀರ್ಥಯಾತ್ರೆ ಕೈಗೊಂಡವರಿಗೂ ಇದು ಕೊನೆಯ ಸಂದೇಶ ಎಂದು ಭೋಲೇಂದ್ರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.