ಅಯೋಧ್ಯೆ: ಪಹಲ್ಗಾಮ್‌ನಲ್ಲಿ ನಡೆದ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಿಂದ ಪ್ರೇರಿತರಾಗಿರುವ ಅಯೋಧ್ಯೆಯ ದಂಪತಿ ತಮ್ಮ ಗಂಡು ಮಗುವಿಗೆ ‘ಸಿಂಧೂರ’ ಎಂದು ನಾಮಕರಣ ಮಾಡಿದೆ.
ದೇಶದಾದ್ಯಂತ ನವಜಾತ ಶಿಶುಗಳಿಗೆ ‘ಸಿಂಧೂ, ಸಿಂಧೂರಿ ಮತ್ತು ಸಿಂಧೂರ’ ಹೆಸರನ್ನು ನಾಮಕರಣ ಮಾಡುವ ಅಲೆ ಮುಂದುವರಿದಿದೆ.
ಸೋನಿ– ರಾಹುಲ್ ಕನೋಜಿಯಾ ದಂಪತಿ, ಮೇ7ರಂದು ಜನಿಸಿದ ತಮ್ಮ ಮಗುವಿಗೆ ‘ಸಿಂಧೂರ’ ಎಂದು ಹೆಸರಿಟ್ಟಿದ್ದಾರೆ.
ಉತ್ತರ ಪ್ರದೇಶದ ಕುಶಿನಗರವೊಂದರಲ್ಲೇ 17 ಹೆಣ್ಣು ಮಕ್ಕಳಿಗೆ ‘ಸಿಂಧೂರ’ ಎಂದು ನಾಮಕರಣ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.