ಅಯೋಧ್ಯೆ ದೀಪೋತ್ಸವ
ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯುವ ದೀಪೋತ್ಸವ ಸಂದರ್ಭದಲ್ಲಿ ಭಕ್ತರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ 15 ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
‘ಜೊತೆಗೆ, ಉತ್ಸವ ನಡೆಯುವ ಪ್ರದೇಶದ 10 ಪ್ರಮುಖ ಸ್ಥಳಗಳಲ್ಲಿ ದಿನದ 24 ತಾಸು ಆಂಬುಲೆನ್ಸ್ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.
‘ತುರ್ತು ಸಂದರ್ಭಗಳಿಗಾಗಿ ಪ್ರಮುಖ ಮೂರು ಆಸ್ಪತ್ರೆಗಳಲ್ಲಿ 50 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ’ ಎಂದು ಮಾಹಿತಿ ನೀಡಿದೆ.
ಎಲ್ಲಾ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳು, ಸಿಬ್ಬಂದಿ ಮತ್ತು ವೈದ್ಯರು ಲಭ್ಯವಿದ್ದಾರೆ ಎಂದು ಅಯೋಧ್ಯೆಯ ಮುಖ್ಯ ಆರೋಗ್ಯಾಧಿಕಾರಿ ಡಾ.ಸುಶೀಲ್ ಕುಮಾರ್ ಬನಿಯಾನ್ ತಿಳಿಸಿದರು.
ದೀಪೋತ್ಸವದ ಅಂಗವಾಗಿ ಸರಯೂ ನದಿ ತೀರದ 56 ಘಾಟ್‌ಗಳಲ್ಲಿ ಸುಮಾರು 28 ಲಕ್ಷ ದೀಪಗಳನ್ನು ಬೆಳಗಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.