ADVERTISEMENT

ಧರ್ಮಸಂಸತ್‌ನಲ್ಲಿ ದಿನಾಂಕ ಘೋಷಣೆ: ಮಹಾಂತ ಸುರೇಶ್‌ ದಾಸ್‌ ಸ್ವಾಮೀಜಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 19:11 IST
Last Updated 6 ಡಿಸೆಂಬರ್ 2018, 19:11 IST
ನವದೆಹಲಿಯಲ್ಲಿ ಗುರುವಾರ ‘ಯುನೈಟೆಡ್‌ ಹಿಂದೂ ಫ್ರಂಟ್‌’ ಸಂಘಟನೆ ಕಾರ್ಯಕರ್ತರು ಮೆರವಣಿಗೆ ನಡೆಸಿದರು ರಾಯಿಟರ್ಸ್‌ ಚಿತ್ರ
ನವದೆಹಲಿಯಲ್ಲಿ ಗುರುವಾರ ‘ಯುನೈಟೆಡ್‌ ಹಿಂದೂ ಫ್ರಂಟ್‌’ ಸಂಘಟನೆ ಕಾರ್ಯಕರ್ತರು ಮೆರವಣಿಗೆ ನಡೆಸಿದರು ರಾಯಿಟರ್ಸ್‌ ಚಿತ್ರ   

ಲಖನೌ/ನವದೆಹಲಿ: ಬಾಬರಿ ಮಸೀದಿ ಧ್ವಂಸದ 26ನೇ ವರ್ಷಾಚರಣೆ ಗುರುವಾರ ಅಯೋಧ್ಯೆ ಮತ್ತು ಇತರೆಡೆ ಶಾಂತಿಯುತವಾಗಿ ನಡೆಯಿತು.

‘ಶೌರ್ಯ ದಿನ’ವನ್ನಾಗಿ ಆಚರಿಸಿದ ವಿಶ್ವ ಹಿಂದೂ ಪರಿಷತ್‌, ಅಯೋಧ್ಯೆಯ ಪ್ರಧಾನ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಸಂತರು ಭಾಗಿಯಾಗಿದ್ದ ಈ ಕಾರ್ಯಕ್ರಮದಲ್ಲಿ ರಾಮ ಮಂದಿರ ನಿರ್ಮಿಸಿಯೇ ತೀರುವುದಾಗಿ ಘೋಷಿಸಿದರು.

‘ಪ್ರಯಾಗರಾಜ್‌ನಲ್ಲಿ ಮುಂದಿನ ತಿಂಗಳು ನಡೆಯುವ ಧರ್ಮ ಸಂಸತ್ ಸಭೆಯಲ್ಲಿ ರಾಮ ಮಂದಿರ ನಿರ್ಮಾಣದ ದಿನಾಂಕ ಘೋಷಿಸಲಾಗುವುದು’ ಮಹಾಂತ ಸುರೇಶ್‌ ದಾಸ್‌ ಸ್ವಾಮೀಜಿ ತಿಳಿಸಿದರು.

ADVERTISEMENT

‘ಮುಸ್ಲಿಂ ಸಂಘಟನೆಗಳು ಕರಾಳ ದಿನವನ್ನಾಗಿ ಆಚರಿಸಿ ಪ್ರತಿಭಟನೆ ವ್ಯಕ್ತಪಡಿಸಿದವು. ‘ವಿವಾದಿತ ಸ್ಥಳದಲ್ಲೇ ಮಸೀದಿ ನಿರ್ಮಿಸಬೇಕು’ ಎಂದು ಒತ್ತಾಯಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.