ADVERTISEMENT

ಅಯೋಧ್ಯೆ ವಿವಾದ: ಕೇಂದ್ರದ ವಿರುದ್ಧ ಅರ್ಜಿ

ಪಿಟಿಐ
Published 4 ಫೆಬ್ರುವರಿ 2019, 18:52 IST
Last Updated 4 ಫೆಬ್ರುವರಿ 2019, 18:52 IST
   

ನವದೆಹಲಿ: ಅಯೋಧ್ಯೆಯ ಬಾಬರಿ ಮಸೀದಿ–ರಾಮ ಮಂದಿರ ವಿವಾದಿತ ನಿವೇಶನದ ಸುತ್ತಲು ಇರುವ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಅರ್ಜಿ ಸಲ್ಲಿಸಲಾಗಿದೆ.

ರಾಜ್ಯ ಸರ್ಕಾರಕ್ಕೆ ಸೇರಿದ ಜಾಗವನ್ನು ವಶಪಡಿಸಿಕೊಳ್ಳಲು ಸಂಸತ್ತಿಗೆ ಯಾವುದೇ ಕಾನೂನು ಅಧಿಕಾರ ಇಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.ರಾಮನ ಭಕ್ತರು ಎಂದು ಹೇಳಿಕೊಂಡಿರುವ ವಕೀಲರ ಗುಂಪು ಈ ಅರ್ಜಿಯನ್ನು ಸಲ್ಲಿಸಿದೆ. ವಿವಾದಾತ್ಮಕವಾದ 2.77 ಎಕರೆ ನಿವೇಶನವು ಸೇರಿ ಸುತ್ತಲಿನ 67 ಎಕರೆ ಜಮೀನನ್ನು ಕೇಂದ್ರ ಸರ್ಕಾರ ಈಗಾಗಲೇ ಸ್ವಾಧೀನ ಮಾಡಿಕೊಂಡಿದೆ.

ಈಜಮೀನನ್ನು ಅದರ ಮೂಲಮಾಲೀಕರಾದ ರಾಮ ಜನ್ಮಭೂಮಿ ನ್ಯಾಸಕ್ಕೆ (ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್ ಸ್ಥಾಪಿಸಿರುವ ಸಂಘಟನೆ) ಕೊಡಲು ಅನುಮತಿ ನೀಡಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ ಅನ್ನು ವಿನಂತಿಸಿಕೊಂಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.