ADVERTISEMENT

ದೇಶ ವಿರೋಧಿಗಳನ್ನು ಜೀವಂತ ಸುಡಲಾಗುತ್ತದೆ: ಓವೈಸಿ ಪೋಸ್ಟರ್ ಸುಟ್ಟ ಅಯೋಧ್ಯೆ ಅರ್ಚಕ

ಪಿಟಿಐ
Published 2 ಜುಲೈ 2022, 2:32 IST
Last Updated 2 ಜುಲೈ 2022, 2:32 IST
   

ಬಾರಾಬಂಕಿ(ಉತ್ತರ ಪ್ರದೇಶ): ಪ್ರಚೋದನಾಕಾರಿ ಹೇಳಿಕೆ ಆರೋಪದ ಹಿನ್ನೆಲೆಯಲ್ಲಿ ಎಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರ ಪೋಸ್ಟರ್ ಅನ್ನು ಅಯೊಧ್ಯೆಯ ತಪಸ್ವಿ ಛಾವನಿ ದೇವಾಲಯದ ಅರ್ಚಕ ಪರಮಹಂಸ ದಾಸ್ ಅವರು ಶುಕ್ರವಾರ ಸುಟ್ಟು ಹಾಕಿದ್ದಾರೆ. ಇವತ್ತು ಫೋಸ್ಟರ್ ಮಾತ್ರ ಸುಡಲಾಗಿದೆ. ನಾಳೆ ಪೋಸ್ಟರ್ ಬದಲು ದೇಶ ವಿರೋಧಿ ನಾಯಕರಿಗೆ ಈ ಗತಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ಇದೇವೇಳೆ, ಧರ್ಮಾಂಧರಿಂದ ಟೈಲರ್ ಹತ್ಯೆ ನಡೆದ ತಮ್ಮದೇ ಪಕ್ಷದ ಸರ್ಕಾರವಿರುವ ರಾಜಸ್ಥಾನಕ್ಕೆ ಭೇಟಿ ನೀಡದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರ ವಿರುದ್ಧವೂ ಕಿಡಿಕಾರಿದ್ದಾರೆ.

ಓವೈಸಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿರುವ ದಾಸ್, ಇಂತಹ ಹೇಳಿಕೆಗಳು ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸುತ್ತಿವೆ ಎಂದು ಆರೋಪಿಸಿದ್ದಾರೆ.

‘ಎಲ್ಲ ದೇಶವಿರೋಧಿ ನಾಯಕರು ಬುದ್ದಿ ಕಲಿಯಬೇಕು. ಇಂದು ಪೋಸ್ಟರ್ ಸುಟ್ಟಿದ್ದೇನೆ, ನಾಳೆ ಅವರನ್ನು(ದೇಶ ವಿರೋಧಿಗಳು) ಜೀವಂತವಾಗಿ ಸುಡಲಾಗುತ್ತದೆ’ಎಂದು ಅವರು ಕಿಡಿಕಾರಿದ್ದಾರೆ.

ಪೋಸ್ಟರ್ ಸುಟ್ಟು ಹಾಕುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೋಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅದನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ, ದಾಸ್ ಅವರನ್ನು ಪೊಲೀಸ್ ಠಾಣೆ ವ್ಯಾಪ್ತಿಯಿಂದ ಹೊರಗೆ ಕರೆದೊಯ್ದರು.

ADVERTISEMENT

ರಿಯಾಜ್ ಅಖ್ತರಿ ಮತ್ತು ಗೌಸ್ ಮೊಹಮ್ಮದ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ಮಂಗಳವಾರ ರಾಜಸ್ಥಾನದ ಉದಯಪುರದ ಧನ್ ಮಂಡಿ ಪ್ರದೇಶದಲ್ಲಿ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಅವರ ಅಂಗಡಿಯಲ್ಲೇ ಕೊಂದಿದ್ದರು. ಬಳಿಕ, ಇಬ್ಬರನ್ನೂ ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.