ADVERTISEMENT

ರಾಮಮಂದಿರ ನಿರ್ಮಿಸಲು ಮುಸ್ಲಿಂ ಪರಿಷತ್‌ನಿಂದ ₹ 5 ಲಕ್ಷ ದೇಣಿಗೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 19:21 IST
Last Updated 9 ನವೆಂಬರ್ 2019, 19:21 IST
ಮೊಮಿನುಲ್‌ ಅವಾಲ್‌
ಮೊಮಿನುಲ್‌ ಅವಾಲ್‌    

ಗುವಾಹಟಿ: ಅಸ್ಸಾಂನ ವಿವಿಧ 21 ಮುಸ್ಲಿಂ ಸಂಘಟನೆಗಳ ಒಕ್ಕೂಟವಾದ ‘ಜನಗೋಷ್ಠಿಯೊ ಸಮನ್ವಯ ಪರಿಷದ್’ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ₹ 5 ಲಕ್ಷ ದೇಣಿಗೆ ನೀಡಲಿದೆ. ಅಯೋಧ್ಯೆ ವಿವಾದ ಕುರಿತ ಸುಪ್ರೀಂ ಕೋರ್ಟ್‌ ತೀರ್ಪನ್ನು ಸ್ವಾಗತಿಸಿದೆ.

‘ಸುಪ್ರೀಂ ಕೋರ್ಟ್ ಇಂದು ನೀಡಿದ ಐತಿಹಾಸಿಕ ತೀರ್ಪು ರಾಮಮಂದಿರ ನಿರ್ಮಿಸಲು ಇದ್ದ ತೊಡಕು ನಿವಾರಿಸಿದೆ. ಮಂದಿರ ನಿರ್ಮಿಸುವ ಟ್ರಸ್ಟ್‌ಗೆ ದೇಣಿಗೆ ನೀಡುತ್ತೇವೆ’ ಎಂದು ಪರಿಷದ್‌ ಮುಖಂಡ, ಸ್ಥಳೀಯ ಬಿಜೆಪಿ ನಾಯಕರೂ ಆದ ಮೊಮಿನುಲ್‌ ಅವಾಲ್‌ ಹೇಳಿದರು. ಇವರು ಅಸ್ಸಾಂ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರೂ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT