ADVERTISEMENT

ಕೇಂದ್ರ ಸಚಿವ ಸುಪ್ರಿಯೊಗೆ ‘ಥಳಿತ’

ಪಿಟಿಐ
Published 19 ಸೆಪ್ಟೆಂಬರ್ 2019, 19:35 IST
Last Updated 19 ಸೆಪ್ಟೆಂಬರ್ 2019, 19:35 IST
ಬಾಬುಲ್ ಸುಪ್ರಿಯೊ ಅವರನ್ನು ಎಳೆದಾಡಿದ ದೃಶ್ಯ–ಪಿಟಿಐ ಚಿತ್ರ
ಬಾಬುಲ್ ಸುಪ್ರಿಯೊ ಅವರನ್ನು ಎಳೆದಾಡಿದ ದೃಶ್ಯ–ಪಿಟಿಐ ಚಿತ್ರ   

ಕೋಲ್ಕತ್ತ: ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರ ಕೂದಲನ್ನು ಹಿಡಿದು ಎಳೆದಾಡಿ, ಅವರಿಗೆ 6 ಗಂಟೆ ಘೇರಾವ್ ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಪಶ್ಚಿಮ ಬಂಗಾಳದ ಜಾಧವಪುರ ವಿಶ್ವವಿದ್ಯಾಲಯದಲ್ಲಿ ಇದು ಗುರುವಾರ ನಡೆದಿದೆ.ಎಬಿವಿಪಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಲು ಬಂದಿದ್ದ ಸುಪ್ರಿಯೊ ಅವರಿಗೆ ಕಪ್ಪುಪಟ್ಟಿ ಪ್ರದರ್ಶಿಸಿ, ನಿಂದಿಸಲಾಯಿತು ಎಂದು ಹೇಳಲಾಗಿದೆ.

ಘಟನೆ ತೀವ್ರ ಸ್ವರೂಪ ಪಡೆದ ಕಾರಣ ಸಂಜೆ 7 ಗಂಟೆ ಹೊತ್ತಿಗೆ ಸ್ಥಳಕ್ಕೆ ಬಂದ ರಾಜ್ಯಪಾಲ ಜಗದೀಶ್ ಧನಘಡ ಅವರು ತಮ್ಮ ಕಾರಿನಲ್ಲಿ ಸುಪ್ರಿಯೊ ಅವರನ್ನು ಕರೆದೊಯ್ದರು. ರಾಜ್ಯಪಾಲರ ಕಾರನ್ನೂ ತಡೆದ ವಿದ್ಯಾರ್ಥಿಗಳು ಒಂದೂವರೆ ತಾಸು ಸತಾಯಿಸಿದರು.

‘ನಾನಿಲ್ಲಿ ರಾಜಕೀಯ ಮಾಡಲು ಬಂದಿಲ್ಲ. ಆದರೂ ಕೂದಲು ಹಿಡಿದು ನನ್ನನ್ನು ಎಳೆದಾಡಿದರು, ಕೆನ್ನೆಗೆ ಬಾರಿಸಲಾಯಿತು. ವಿದ್ಯಾರ್ಥಿಗಳ ವರ್ತನೆಯಿಂದ ಬೇಸರವಾಗಿದೆ’ ಎಂದು ಸುಪ್ರಿಯೊ ಆರೋಪಿಸಿದ್ದಾರೆ. ಇದನ್ನುವಿದ್ಯಾರ್ಥಿ ಸಂಘಟನೆಗಳು
ತಳ್ಳಿಹಾಕಿವೆ.ಮಧ್ಯಾಹ್ನ 2.30ರ ವೇಳೆಗೆ ವಿಶ್ವವಿದ್ಯಾಲಯದ ಪ್ರವೇಶದ್ವಾರದಲ್ಲಿ ತಡೆದ ಎಡಪಂಥೀಯ ಸಂಘಟನೆಗಳಾದ ಆರ್ಟ್ಸ್‌ ಫ್ಯಾಕಲ್ಟಿ ಸ್ಟೂಡೆಂಟ್ಸ್‌ ಯೂನಿಯನ್ (ಎಎಫ್‌ಎಸ್‌ಯು), ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಹಾಗೂ ಸಿಪಿಎಂ ವಿದ್ಯಾರ್ಥಿ ಸಂಘಟನೆಯ ಸದಸ್ಯರು ‘ಗೋಬ್ಯಾಕ್ ಸುಪ್ರಿಯೊ’ ಎಂದು ಘೋಷಣೆ ಕೂಗಿದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.