ADVERTISEMENT

ದುಬೈಯಿಂದ ಮರಳಿದ್ದ ಬಾಲಕಿಗೆ ಮಂಕಿ ಪಾಕ್ಸ್‌ ತಗುಲಿಲ್ಲ: ಆಂಧ್ರ ಆರೋಗ್ಯ ನಿರ್ದೇಶಕ

ಪಿಟಿಐ
Published 17 ಜುಲೈ 2022, 15:00 IST
Last Updated 17 ಜುಲೈ 2022, 15:00 IST
   

ಅಮರಾವತಿ: ‘ದುಬೈಯಿಂದ ವಿಜಯವಾಡಕ್ಕೆ ಮರಳಿದ್ದ ಎರಡು ವರ್ಷದ ಬಾಲಕಿಗೆ ‘ಮಂಕಿ ಪಾಕ್ಸ್‌’ ತಗುಲಿಲ್ಲ. ಪರೀಕ್ಷೆಯಿಂದ ಇದು ಖಾತರಿಯಾಗಿದೆ’ ಎಂದು ಆಂಧ್ರಪ್ರದೇಶದ ಆರೋಗ್ಯ ನಿರ್ದೇಶಕ ಜೆ.ನಿವಾಸ್‌ ಹೇಳಿದ್ದಾರೆ.

‘ಬಾಲಕಿಯ ಕೈಗಳ ಮೇಲೆ ಗುಳ್ಳೆಗಳು ಕಂಡುಬಂದಿದ್ದವು. ಹೀಗಾಗಿ ಆಕೆಯ ಜೊತೆ ಕುಟುಂಬ ಸದಸ್ಯರನ್ನೂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರನ್ನೂ ಪ್ರತ್ಯೇಕ ವಾಸದಲ್ಲಿ ಇಡಲಾಗಿತ್ತು. ಬಾಲಕಿಯ ರಕ್ತದ ಮಾದರಿಯನ್ನು ಸಂಗ್ರಹಿಸಿ ವಿಮಾನದ ಮೂಲಕ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ (ಎನ್‌ಐವಿ) ರವಾನಿಸಲಾಗಿತ್ತು. ಆಕೆಗೆ ಮಂಕಿ ಪಾಕ್ಸ್‌ ತಗುಲಿಲ್ಲ ಎಂಬುದು ಪರೀಕ್ಷೆಯಿಂದ ದೃಢಪಟ್ಟಿದೆ’ ಎಂದು ವಿವರಿಸಿದ್ದಾರೆ.

‌‘ಬಾಲಕಿಯ ಕುಟುಂಬದವರು ಯಾರ ಸಂಪರ್ಕಕ್ಕೂ ಬಂದಿಲ್ಲ. ಆಂಧ್ರ‍ಪ್ರದೇಶದಲ್ಲಿ ಮಂಕಿ ಪಾಕ್ಸ್‌ ಪ್ರಕರಣಗಳು ಪತ್ತೆಯಾಗಿಲ್ಲ. ಹೀಗಾಗಿ ಯಾರೂ ಆತಂಕಕ್ಕೆ ಒಳಗಾಗಬಾರದು’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.