ಗೋಪೇಶ್ವರ: ಚಳಿಗಾಲದ ವಿರಾಮದ ಬಳಿಕ ಉತ್ತರಾಖಂಡದ ಬದರಿನಾಥ ದೇವಾಲಯದ ಪ್ರವೇಶ ದ್ವಾರಗಳನ್ನು ಮಂಗಳವಾರ ತೆರೆಯಲಾಗಿದೆ.
ವೇದ ಮಂತ್ರಗಳ ಉದ್ಘೋಷದೊಂದಿಗೆ ಮುಂಜಾನೆ 4.15ಕ್ಕೆ ದೇಗುಲದ ಮುಖ್ಯ ಅರ್ಚಕ ಈಶ್ವರಿ ಪ್ರಸಾದ್ ನಂಬೂದರಿ ಅವರು ಬಾಗಿಲನ್ನು ತೆರೆದರು.
ಈ ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ, ಪುರೋಹಿತರು, ಆಡಳಿತಾಧಿಕಾರಿಗಳು ಸೇರಿದಂತೆ ಸೀಮಿತ ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು. ಈ ವೇಳೆ ಎಲ್ಲಾ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಲಾಗಿತ್ತು.
ಸಾಮಾನ್ಯವಾಗಿ ಈ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಳುತ್ತಾರೆ. ಆದರೆ ಕೋವಿಡ್ ದೃಷಿಯಿಂದ ಈ ಬಾರಿ ಹೆಚ್ಚಿನ ಜನರು ಇರಲಿಲ್ಲ. ಸತತ ಎರಡನೇ ವರ್ಷ ಸರಳ ಕಾರ್ಯಕ್ರಮದೊಂದಿಗೆ ದೇವಾಲಯ ಪ್ರವೇಶ ದ್ವಾರ ತೆರೆಯಲಾಗಿದೆ. ಇದರೊಂದಿಗೆ ಹಿಮಾಲಯದ ಎಲ್ಲಾ ನಾಲ್ಕು ದೇವಾಲಯಗಳ ಬಾಗಿಲು ತೆರೆದಂತೆ ಆಗಿದೆ. ಕೇದಾರನಾಥ ದೇವಾಲಯದ ಬಾಗಿಲನ್ನು ಸೋಮವಾರ ಮತ್ತು ಯಮುನೋತ್ರಿ ಹಾಗೂ ಗಂಗೋತ್ರಿ ದೇವಾಲಯಗಳ ಪ್ರವೇಶ ದ್ವಾರವನ್ನು ಮೇ 14 ಮತ್ತು 15ರಂದು ತೆರೆಯಲಾಗಿತ್ತು.
ಆದರೆ ಕೋವಿಡ್ ಪರಿಸ್ಥಿತಿ ಕಾರಣ ಸದ್ಯ ಭಕ್ತರು ದೇವಾಲಯಗಳಿಗೆ ತೆರಳಲು ಅವಕಾಶ ಇರುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.