ರೇವಂತ ರೆಡ್ಡಿ
ಹೈದರಾಬಾದ್: ಬೆಂಗಳೂರು–ಹೈದರಾಬಾದ್ ಪ್ರದೇಶವನ್ನು ‘ಏರೋಸ್ಪೇಸ್ ಮತ್ತು ಡಿಫೆನ್ಸ್ ಕಾರಿಡಾರ್’ ಎಂದು ಘೋಷಿಸುವಂತೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದರು.
ಸಫ್ರಾನ್ ಘಟಕಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಳೆದ ಕೆಲವು ವರ್ಷಗಳಲ್ಲಿ ತೆಲಂಗಾಣದ ಏರೊಸ್ಪೇಸ್ ಮತ್ತು ಡಿಫೆನ್ಸ್ ವಲಯದಿಂದ ರಫ್ತು ದ್ವಿಗುಣವಾಗಿದೆ. ಕಳೆದ 9 ತಿಂಗಳಲ್ಲಿ ಸುಮಾರು ₹30,000 ಕೋಟಿ ಔಷಧ ರಫ್ತಾಗಿದೆ’ ಎಂದು ತಿಳಿಸಿದರು.
‘ನಾಗರಿಕ ವಿಮಾನಯಾನ ಸಚಿವಾಲಯದಿಂದ ತೆಲಂಗಾಣವು ಏರೊಸ್ಪೇಸ್ ಪ್ರಶಸ್ತಿ ಪಡೆದಿದೆ. ಏರೊಸ್ಪೇಸ್ ವಲಯದಲ್ಲಿ ಹೂಡಿಕೆಗೆ ಕೌಶಲ ಅಭಿವೃದ್ಧಿ ಅಗತ್ಯ. ಹೀಗಾಗಿ ಬೆಂಗಳೂರು–ಹೈದರಾಬಾದ್ ಪ್ರದೇಶವನ್ನು ಏರೋಸ್ಪೇಸ್ ಮತ್ತು ಡಿಫೆನ್ಸ್ ಕಾರಿಡಾರ್ ಎಂದು ಘೋಷಿಸಬೇಕು’ ಎಂದು ಮನವಿ ಮಾಡಿದರು.
ತೆಲಂಗಾಣದ ಏರೊಸ್ಪೇಸ್ ಮತ್ತು ರಕ್ಷಣಾ ವಲಯದ ಬೆಳವಣಿಗೆಯಲ್ಲಿ ಸಫ್ರಾನ್ ಘಟಕವು ಮಹತ್ವ ಮೈಲುಗಲ್ಲಾಗಲಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.