ADVERTISEMENT

ಕುಂಟುತ್ತಾ ಸಾಗಿದೆ ಠೇವಣಿ ಬಡ್ಡಿ ಹೆಚ್ಚಳ

ರೆಪೊ ದರ ಏರಿಕೆಗೆ ಅನುಗುಣವಾಗಿ ಏರುತ್ತಿದೆ ಸಾಲದ ದರ

ಪಿಟಿಐ
Published 20 ನವೆಂಬರ್ 2022, 14:07 IST
Last Updated 20 ನವೆಂಬರ್ 2022, 14:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ರೆಪೊ ದರದಲ್ಲಿ ಏರಿಕೆ ಆದಾಗ ಸಾಲದ ಮೇಲಿನ ಬಡ್ಡಿ ದರವನ್ನು ಹೆಚ್ಚಿಸುವ ಬ್ಯಾಂಕ್‌ಗಳು, ಠೇವಣಿಗಳಿಗೆ ನೀಡುವ ಬಡ್ಡಿ ದರವನ್ನು ಅಷ್ಟೇ ವೇಗದಲ್ಲಿ ಹೆಚ್ಚಿಸುತ್ತಿಲ್ಲ.

ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಈ ವರ್ಷದ ಮೇ ತಿಂಗಳಿ ನಿಂದ ಈಚೆಗೆ ರೆಪೊ ದರವನ್ನು ಶೇಕಡ 1.90ರಷ್ಟು ಹೆಚ್ಚಿಸಿದೆ. ಎಲ್ಲ ಪ್ರಮುಖ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿದರವನ್ನು (ಇಬಿಎಲ್‌ಆರ್‌) ಸಹ ಶೇ 1.90ರಷ್ಟು ಏರಿಕೆ ಮಾಡಿವೆ. ಆದರೆ, ಠೇವಣಿ ಬಡ್ಡಿ ದರವನ್ನು ಈ ಪ್ರಮಾಣ ದಲ್ಲಿ ಹೆಚ್ಚಳ ಮಾಡಿಲ್ಲ.

ಆರ್‌ಬಿಐನ ಈಚಿನ ಒಂದು ಲೇಖನದ ಪ್ರಕಾರ, 2022ರ ಅಕ್ಟೋ ಬರ್ ಅಂತ್ಯದವರೆಗೆ ಬ್ಯಾಂಕ್‌ಗಳು ರೆಪೊ ದರಕ್ಕೆ ಅನುಗುಣವಾಗಿ ತಮ್ಮ ಇಬಿಎಲ್‌ಆರ್‌ ಅನ್ನು ಶೇ 1.90ರಷ್ಟು ಹೆಚ್ಚಿಸಿವೆ. ಇದೇ ಅವಧಿಯಲ್ಲಿ 1 ವರ್ಷದ ಎಂಸಿಎಲ್‌ಆರ್‌ ಅನ್ನು ಶೇ 0.85ರಷ್ಟು ಏರಿಕೆ ಮಾಡಿವೆ. ಆದರೆ, ಅವಧಿ ಠೇವಣಿಗಳ ಬಡ್ಡಿದರವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಹೊಸ ಠೇವಣಿಗಳಿಗೆ ದರವನ್ನು ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ ಸರಾ ಸರಿ ಶೇ 0.48ರಷ್ಟು ಏರಿಕೆ ಮಾಡ ಲಾಗಿದೆ.

ADVERTISEMENT

ಸರ್ಕಾರಿ ವಲಯದ ಬ್ಯಾಂಕ್‌ ಗಳಿಗಿಂತಲೂ ಖಾಸಗಿ ವಲಯದ ಬ್ಯಾಂಕ್‌ಗಳ ಸಾಲ ಮತ್ತು ಠೇವಣಿ ಬಡ್ಡಿದರ ವರ್ಗಾವಣೆ ಹೆಚ್ಚಿಗೆ ಇದೆ. ಸಾಲ ನೀಡಿಕೆಯ ಬೆಳವಣಿಗೆಯು ಸಹ ಸರ್ಕಾರಿ ವಲಯದ ಬ್ಯಾಂಕ್‌ಗಳಿಗಿಂತಲೂ ಖಾಸಗಿ ವಲಯದ ಬ್ಯಾಂಕ್‌ ಗಳಲ್ಲಿ ಗರಿಷ್ಠ ಮಟ್ಟದಲ್ಲಿದೆ ಎಂದು ಆರ್‌ಬಿಐ ಲೇಖನದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.