ADVERTISEMENT

ಬಾಟ್ಲಾ ಹೌಸ್‌ ಎನ್‌ಕೌಂಟರ್‌: ಐಎಂ ಉಗ್ರ ಅರಿಜ್‌ ಖಾನ್ ತಪ್ಪಿತಸ್ಥ

ಪಿಟಿಐ
Published 8 ಮಾರ್ಚ್ 2021, 10:50 IST
Last Updated 8 ಮಾರ್ಚ್ 2021, 10:50 IST
ಅರಿಜ್‌ ಖಾನ್
ಅರಿಜ್‌ ಖಾನ್   

ನವದೆಹಲಿ: ಬಾಟ್ಲಾ ಹೌಸ್‌ ಎನ್‌ಕೌಂಟರ್‌ ಸಂಬಂಧಿಸಿದಪ್ರಕರಣದಲ್ಲಿ ಇಂಡಿಯನ್ ಮುಜಾಹಿದೀನ್ಉಗ್ರ ಸಂಘಟನೆಯ ಸಹಚರ ಎನ್ನಲಾದ ಅರಿಜ್‌ ಖಾನ್‌ನನ್ನು ತಪ್ಪಿತಸ್ಥ ಎಂದು ನ್ಯಾಯಾಲಯವು ಪರಿಗಣಿಸಿದೆ.

ಸೋಮವಾರ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್‌ ನ್ಯಾಯಧೀಶ ಸಂದೀಪ್‌ ಯಾದವ್‌ ಅವರು,‘ಪೊಲೀಸ್ ಇನ್‌ಸ್ಪೆಕ್ಟರ್‌ ಎಂ.ಸಿ.ಶರ್ಮಾ ಅವರ ಹತ್ಯೆಯ ಹಿಂದೆ ಅರಿಜ್ ಖಾನ್‌ ಮತ್ತು ಆತನ ಸಹಚರರು ಕೈಯಿದೆ ಎಂಬುದು ಸಾಕ್ಷ್ಯಧಾರಗಳಿಂದ ತಿಳಿದುಬಂದಿದೆ.

ಹಾಗಾಗಿ ನ್ಯಾಯಾಲಯವು ಅರಿಜ್‌ ಖಾನ್‌ನನ್ನು ತಪ್ಪಿತಸ್ಥ ಎಂದು ಗುರುತಿಸಿದೆ. ಶಿಕ್ಷೆಯ ಪ್ರಮಾಣವನ್ನು ಮಾರ್ಚ್‌ 15 ರಂದು ನಿಗದಿಪಡಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

2008ರಲ್ಲಿ ದಕ್ಷಿಣ ದೆಹಲಿಯ ಜಮಿಯಾ ನಗರದಲ್ಲಿ ನಡೆದ ಬಾಟ್ಲಾ ಹೌಸ್‌ ಎನ್‌ಕೌಂಟರ್‌ನಲ್ಲಿ ದೆಹಲಿಯ ವಿಶೇಷ ಘಟಕದ ಇನ್‌ಸ್ಪೆಕ್ಟರ್‌ ಶರ್ಮಾ ಅವರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.