ADVERTISEMENT

ರಜೆಯಲ್ಲೂ ಜನರ ಸೇವೆ ಮಾಡುತ್ತಿರುವ ಯೋಧ!

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 10:15 IST
Last Updated 16 ಏಪ್ರಿಲ್ 2020, 10:15 IST
   

ನವದೆಹಲಿ (ಪಿಟಿಐ): ಲಾಕ್‌ಡೌನ್‌ನಿಂದಾಗಿ ಅಸ್ಸಾಂನಲ್ಲಿ ಸಂಕಷ್ಟದಲ್ಲಿರುವ ಜನರಿಗೆರಜೆಯ ನಡುವೆಯೂದಿನಸಿ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸುವ ಮೂಲಕ ಸಿಆರ್‌ಪಿಎಫ್‌ ಯೋಧರೊಬ್ಯೊಬರು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಸಬ್‌ ಇನ್‌ಸ್ಪೆಕ್ಟರ್‌ ಪದ್ಮೇಶ್ವರ್‌ ದಾಸ್‌ (48) ಅವರು, ಉಳಿತಾಯದ ಹಣವನ್ನು ತಮ್ಮೂರಿನ ಬಡವರ ಹೊಟ್ಟೆ ತುಂಬಿಸಲು ವ್ಯಯಿಸುತ್ತಿದ್ದಾರೆ.ಇವರ ಈ ಸಾಮಾಜಿಕ ಸೇವೆಗೆ ಪತ್ನಿ ಮತ್ತು ತಾಯಿ ಕೈಜೋಡಿಸಿದ್ದಾರೆ.

‘ರಜೆಯ ಮೇಲೆ ಮಾರ್ಚ್‌ 3ರಂದು ಊರಿಗೆ ಬಂದೆ. ಕೆಲಸಕ್ಕೆ ಹಿಂತಿರುಗಬೇಕಿದ್ದ ಸಂದರ್ಭದಲ್ಲಿಯೇ ಲಾಕ್‌ಡೌನ್‌ ಘೋಷಣೆಯಾಯಿತು. ಕಾಶ್ಮೀರದಲ್ಲಿರುವ ನನ್ನ ಸೇನಾ ಪಡೆ ಹಿಂತಿರುಗದಂತೆ ಸಂದೇಶ ಕಳುಹಿಸಿತು.ನಾನು ಸೇನಾ ಪಡೆಯ ಜೊತೆಗಿದ್ದರೆ, ಸಹೋದ್ಯೋಗಿಗಳೊಂದಿಗೆ ಅಗತ್ಯವಿರುವವರಿಗೆ ನೆರವು ನೀಡುತ್ತಿದ್ದೆ. ಅದೇ ಕೆಲಸವನ್ನು ನಾನೊಬ್ಬನೇ ಮಾಡಲು ನಿರ್ಧರಿಸಿದೆ’ ಎನ್ನುತ್ತಾರೆಪದ್ಮೇಶ್ವರ್‌.

ADVERTISEMENT

ಎರಡು ಕೆ.ಜಿ ಅಕ್ಕಿ, ಒಂದು ಕೆ.ಜಿ ಆಲೂಗೆಡ್ಡೆ, ಎಣ್ಣೆ, ಉಪ್ಪು, ಅರ್ಧ ಕೆ.ಜಿ ಈರುಳ್ಳಿಯ 50 ಪ್ಯಾಕೆಟ್‌ಗಳನ್ನು ಸಿದ್ಧಪಡಿಸಿ ಅವರು ಸಂಕಷ್ಟದಲ್ಲಿರುವವರಿಗೆ ವಿತರಿಸಿದ್ದಾರೆ.

‘ಅಧಿಕೃತ ರಜೆಯಲ್ಲಿದ್ದರೂ, ದಾಸ್ ಜನರಿಗೆ ಸಹಾಯ ಮಾಡುತ್ತಿರುವುದು ತಿಳಿದು ಹೆಮ್ಮೆಯಾಯಿತು’ ಎಂದು ಕೇಂದ್ರ ಮೀಸಲು ಪೊಲೀಸ್ ಪಡೆಯ 76ನೇ ಬೆಟಾಲಿಯನ್‌ ಕಮಾಂಡೆಂಟ್ ನೀರಜ್ ಪಾಂಡೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.