ADVERTISEMENT

ರಾಜಸ್ಥಾನದ ಹಲವೆಡೆ 5 ಡಿಗ್ರಿಗಿಂತ ಕಡಿಮೆ ತಾಪಮಾನ

ಪಿಟಿಐ
Published 2 ಜನವರಿ 2023, 10:01 IST
Last Updated 2 ಜನವರಿ 2023, 10:01 IST
   

ಜೈಪುರ: ಉತ್ತರ ಭಾರತ ಚಳಿಯಿಂದ ತತ್ತರಿಸುತ್ತಿದ್ದು ರಾಜಸ್ಥಾನದ ಬಹುತೇಕ ಭಾಗಗಳಲ್ಲಿ ಚಳಿ ವಿಪರೀತವಾಗಿದೆ. ಕನಿಷ್ಠ ತಾಪಮಾನ ಐದು ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವಕ್ತಾರರು ತಿಳಿಸಿದ್ದಾರೆ.

ಭಾನುವಾರ ರಾತ್ರಿ ಹನುಮಾನ್‌ಗಢದ ಸಂಗ್ರಿಯಾದಲ್ಲಿ 1.1 ಡಿಗ್ರಿ ಸೆಲ್ಸಿಯಸ್ ಮತ್ತು ಫತೇಪುರ್‌ನ ಸಿಕಾರ್‌ನಲ್ಲಿ 1.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ಹವಾಮಾನ ಇಲಾಖೆಯ ಅಂಕಿಅಂಶಗಳ ಪ್ರಕಾರ, ಭಾನುವಾರ ರಾತ್ರಿ ಚಿತ್ತೋರ್‌ಗಢದಲ್ಲಿ 2.7 ಡಿಗ್ರಿ, ಸಿಕರ್‌ನಲ್ಲಿ 3.0 ಡಿಗ್ರಿ, ಅಲ್ವಾರ್ ಮತ್ತು ಸಿರೋಹಿಯಲ್ಲಿ ತಲಾ 3.8 ಡಿಗ್ರಿ, ಪಿಲಾನಿಯಲ್ಲಿ 4.2 ಡಿಗ್ರಿ, ಭಿಲ್ವಾರದಲ್ಲಿ 4.5 ಡಿಗ್ರಿ, ಗಂಗಾನಗರದಲ್ಲಿ 5.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ADVERTISEMENT

ರಾಜಧಾನಿ ಜೈಪುರದಲ್ಲಿ ಕಳೆದ 24 ಗಂಟೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ 21.0 ಡಿಗ್ರಿ ಮತ್ತು 8.0 ಡಿಗ್ರಿ ಸೆಲ್ಸಿಯಸ್ ಆಗಿದೆ.

ಹಲವು ಜಿಲ್ಲೆಗಳಲ್ಲಿ ಮಂಜಿನೊಂದಿಗೆ ವಿಪರೀತ ಚಳಿ ಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.