ADVERTISEMENT

ಸುಲಲಿತ ಬದುಕು: ದೇಶದ 111 ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಅಗ್ರಸ್ಥಾನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 10:19 IST
Last Updated 4 ಮಾರ್ಚ್ 2021, 10:19 IST
ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌
ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌   

ನವದೆಹಲಿ: ‘ಸುಲಲಿತ ಬದುಕು ಸೂಚ್ಯಂಕ’ದ 111 ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನ ಪಡದಿದೆ.

ಪುಣೆ, ಅಹಮದಾಬಾದ್‌, ಚೆನ್ನೈ, ಸೂರತ್‌, ನವಿ ಮುಂಬೈ, ಕೊಯಮತ್ತೂರು ಮತ್ತು ವಡೋದರಾ ನಂತರದ ಸ್ಥಾನಗಳನ್ನು ಪಡೆದಿವೆ.

ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರದೀಪ್‌ ಸಿಂಗ್‌ ಪುರಿ ಗುರುವಾರ ಅತ್ಯುತ್ತಮವಾಗಿ ಬದುಕು ಸಾಗಿಸುವ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.

ADVERTISEMENT

ಹತ್ತು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಶಿಮ್ಲಾ ಮೊದಲ ಸ್ಥಾನ ಪಡೆದಿದೆ.

ನವದೆಹಲಿ ಮಹಾನಗರ ಪಾಲಿಕೆಯು ‘ಮಹಾನಗರ ಪಾಲಿಕೆ ಕಾರ್ಯಕ್ಷಮತೆ ಸೂಚ್ಯಂಕ’ದಲ್ಲಿ ಮೊದಲ ಸ್ಥಾನ ಪಡೆದಿದೆ.

10 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಹೊಂದಿರುವ ವಿಭಾಗದಲ್ಲಿ ‘ಮುನ್ಸಿಪಾಲ್‌ ಕಾರ್ಯಕ್ಷಮತೆ ಸೂಚ್ಯಂಕ’ದಲ್ಲಿ ಇಂದೋರ್‌ ನಗರ ಮೊದಲ ಸ್ಥಾನ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.