ADVERTISEMENT

+92 ಆರಂಭಿಕ ಸಂಖ್ಯೆಯಿಂದ ಬರುವ ಕರೆಗಳ ಬಗ್ಗೆ ಎಚ್ಚರ ವಹಿಸಿ: ಸರ್ಕಾರದ ಎಚ್ಚರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮಾರ್ಚ್ 2024, 16:39 IST
Last Updated 29 ಮಾರ್ಚ್ 2024, 16:39 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಮೊಬೈಲ್‌ ಸಂಪರ್ಕವನ್ನು ಸ್ಥಗಿತಗೊಳಿಸುವ ಅಥವಾ ಮೊಬೈಲ್ ಸಂಖ್ಯೆ ದುರ್ಬಳಕೆಯಾಗುತ್ತಿದೆ ಎಂದು ಹೇಳುವ ಕರೆಗಳು ವಿದೇಶಿ ಮೂಲದ ಸಂಖ್ಯೆಯಿಂದ ಬರುತ್ತಿದ್ದು, ಈ ಕುರಿತು ಮೊಬೈಲ್ ಬಳಕೆದಾರರು ಜಾಗೃತರಾಗಿರುವಂತೆ ದೂರಸಂಪರ್ಕ ಇಲಾಖೆ ಎಚ್ಚರಿಕೆ ನೀಡಿದೆ.

+92-xxxxxxxxxx ಸಂಖ್ಯೆಯಿಂದ ಬರುವ ಕರೆ ಇದಾಗಿದೆ. ಈ ಸಂಖ್ಯೆಯಿಂದ ಬರುವ ಕರೆಗಳಿಂದ ಹಲವರು ವಂಚನೆಗೊಳಗಾಗಿದ್ದಾರೆ ಎಂದು ಬಂದ ದೂರುಗಳನ್ನು ಅನ್ವಯಿಸಿ ಚಕ್ಷು ವರದಿ ಹೇಳಿದ್ದು, ಸಂಚಾರ ಸಾಥಿ ಪೋರ್ಟಲ್‌ ಮೂಲಕ ಅಗತ್ಯ ಮಾಹಿತಿ ನೀಡಲಾಗುತ್ತಿದೆ ಎಂದು ಇಲಾಖೆ ಹೇಳಿದೆ.

ADVERTISEMENT

‘ದೂರಸಂಪರ್ಕ ಇಲಾಖೆಯಿಂದ ಮಾಡುತ್ತಿರುವ ಕರೆ’ ಎಂದು ಹೇಳುತ್ತಿರುವ ಈ ಸಂಖ್ಯೆಯ ಬಳಕೆದಾರರು, ಸೈಬರ್ ದಾಳಿ ನಡೆಸುವ ಅಪಾಯ ಕಂಡುಬಂದಿದೆ. ಹಣವನ್ನು ದೋಚುವ ಸಾಧ್ಯತೆಯೂ ಹೆಚ್ಚು. ಇಂಥ ಕರೆಗಳನ್ನು ಮಾಡುವಂತೆ ಯಾವುದೇ ಸಂಸ್ಥೆಗೆ ದೂರ ಸಂಪರ್ಕ ಇಲಾಖೆ ಯಾವುದೇ ಸೂಚನೆ ನೀಡಲ್ಲ ಮತ್ತು ಕರೆಗಳನ್ನು ಮಾಡುತ್ತಿಲ್ಲ. ಇಂಥ ವಂಚನೆಗೆ ಒಳಗಾದಲ್ಲಿ ಅಥವಾ ತಿಳಿಸಿರುವ ಸಂಖ್ಯೆಗಳಿಂದ ಕರೆಗಳು ಬಂದಲ್ಲಿ ಅವುಗಳ ವಿರುದ್ಧ www.sancharsaathi.gov.in ಅಂತರ್ಜಾಲ ತಾಣದಲ್ಲಿ ದೂರು ದಾಖಲಿಸಬೇಕು’ ಎಂದು ತಿಳಿಸಿದೆ.

ಜತೆಗೆ ಸಹಾಯವಾಣಿ 1930ಗೆ ಕರೆ ಮಾಡಬಹುದು. ವಂಚಕರ ದಾಳಿಗೆ ಒಳಗಾಗಿದ್ದರೆ www.cybercrime.gov.in ಅಂತರ್ಜಾಲ ತಾಣದಲ್ಲೂ ದೂರು ದಾಖಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.